ರಾಷ್ಟ್ರೀಕೃತ ಬ್ಯಾಂಕ್ ಪಿಗ್ಮಿ ಸಂಗ್ರಹಕಾರರ ಕಮಿಷನ್ ಹಣಕ್ಕೂ ಪರದಾಟ‌ ; ಆರೋಪ

0
290

ರಿಪ್ಪನ್‌ಪೇಟೆ: ಕೇಂದ್ರ ಸರ್ಕಾರ ಬ್ಯಾಂಕ್‌ಗಳ ವಿಲೀನದಿಂದಾಗಿ ರಾಷ್ಟ್ರೀಕೃತ ಬ್ಯಾಂಕ್ ಪಿಗ್ಮಿ ಸಂಗ್ರಹಕಾರರು ತಮ್ಮ ತಿಂಗಳ ಪಗಾರಕ್ಕಾಗಿ ಪರಿತಪ್ಪಿಸುವಂತಾಗಿದೆ ಎಂದು ಪಿಗ್ಮಿ ಸಂಗ್ರಹಕಾರರು ತಮ್ಮ ಅಳಲನ್ನು ಮಾಧ್ಯಮದವರ ಬಳಿ ತೊಡಿಕೊಂಡಿದ್ದು ಹೀಗೆ.

ಈ ಹಿಂದೆ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾಬ್ಯಾಂಕ್ ಠೇವಣಿ ಸಂಗ್ರಹಕಾರರಿಗೆ ತಿಂಗಳ ಅಂತ್ಯದಲ್ಲಿ ಪಗಾರ ಹಾಗೂ ಕಮಿಷನ್ ನೀಡುತ್ತಿದ್ದರು ಆದರೆ ಬ್ಯಾಂಕ್ ವಿಲೀನದ ನಂತರದಲ್ಲಿ ಎಜಿಎಂ ಜಿಎಂ ಕಛೇರಿಗೆ ಕಳುಹಿಸಿ ಕಮೀಷನ್ ನೀಡುವುದು ವಿಳಂಬಕ್ಕೆ ಕಾರಣವಾಗಿ ಠೇವಣಿ ಸಂಗ್ರಹಕಾರರು ಪರಿತಪ್ಪಿಸುವಂತಾಗಿದೆ ಎನ್ನಲಾಗಿದೆ.

ಬಿಸಿಲು-ಮಳೆ-ಚಳಿ ಎನ್ನದೆ ತಮ್ಮ ನಿತ್ಯ ಕಾಯಕವನ್ನು ಠೇವಣಿ ಸಂಗ್ರಹಕಾರರು ಮನೆ-ಮನೆಗಳಿಗೆ, ಅಂಗಡಿಗಳಿಗೆ ಹೀಗೆ ಊರೂರು ಸುತ್ತಿ ಬರುವ ಆದಾಯದಲ್ಲಿ ಅಲ್ಪ ಸ್ವಲ್ಪ ಹಣವನ್ನು ಉಳಿತಾಯ ಮಾಡಿ ಬ್ಯಾಂಕ್ ಠೇವಣಿ ಸಂಗ್ರಹಕಾರರಿಗೆ ಕಟ್ಟಿ ಇಡಿಗಂಟು ತರುವ ಪದ್ದತಿ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿರುವುದು ಇದರಿಂದ ಬ್ಯಾಂಕ್‌ಗಳವರು ಸಾಲ ನೀಡಲಾದರೂ ಅದನ್ನು ಪಿಗ್ಮಿ ಹಣದಿಂದ ತೀರುವಳಿ ಮಾಡಿಕೊಳ್ಳಲು ಅವಕಾಶಗಳಿದ್ದು ಈಗಿನ ಬ್ಯಾಂಕ್ ವ್ಯವಸ್ಥೆಯಿಂದಾಗಿ ಸಂಗ್ರಹಕಾರರು ಬೀದಿಗೆ ಬರುವಂತಾಗಿದೆ.

ಬ್ಯಾಂಕ್ ಅಧಿಕಾರಿಗಳು ಠೇವಣಿ ಸಂಗ್ರಹಕಾರರು ಬಿಲ್ ಮಾಡಲು ಹಾಗೂ ಸಂಗ್ರಹಣೆಯ ಲೆಕ್ಕ ಪಡೆಯಲು ಕಾಯುಸುತ್ತಿರುವುದು ನೋಡಿದರೆ ಬ್ಯಾಂಕ್ ಆಡಳಿತಕ್ಕೆ ಠೇವಣಿ ಸಂಗ್ರಹಕಾರರನ್ನು ಕೆಲಸದಿಂದ ತೆಗೆದು ಹಾಕಿದರೆ ಕೆಲಸ ಕಡಿಮೆಯಾಗುತ್ತದೆಂಬುವವರಂತೆ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಬ್ಯಾಂಕ್‌ಗಳಿಗೆ ಠೇವಣಿ ಸಂಗ್ರಹಕಾರರ ಹಣವೇ ಮುಖ್ಯವಾಗಿತ್ತು. ಈಗ ಇದರ ಅಗತ್ಯ ಕಾಣುವುದಿಲ್ಲವೇನೊ ಎಂಬಂತೆ ತೋರುತ್ತಿದೆ.

ಒಟ್ಟಾರೆಯಾಗಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಠೇವಣಿ ಸಂಗ್ರಹಕಾರರ ಬವಣೆ ಕೇಳೋರಿಲ್ಲದ ಸ್ಥಿತಿ ಎದುರಾಗಿದೆ ಈಗ ಶಾಲಾ ಕಾಲೇಜ್‌ಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಲು ಸಾಲ ಸೋಲ ಮಾಡಬೇಕಾದ ಅನಿರ್ವಾತೆ ಎದುರಾಗಿದೆ. ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಸ್ವಾಮಿ ? ಎಂದು ತಮ್ಮ ಮನದಾಳದ ನೋವಯನ್ನು ತೋಡಿಕೊಂಡರು.

ಈ ಬಗ್ಗೆ ಇನ್ನಾದರೂ ಬ್ಯಾಂಕ್ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಿ ರಾಷ್ಟ್ರೀಕೃತ ಠೇವಣಿ ಸಂಗ್ರಹಕಾರರ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ಮುಂದಾಗುವರೆ ಕಾದು ನೋಡಬೇಕಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here