ರಾಹುಲ್ ಗಾಂಧಿ ವಿಚಾರಣೆಯಲ್ಲಿ ಇರೋದು ಕೇವಲ ರಾಜಕೀಯ ದುರುದ್ದೇಶ ; ಸಿದ್ದರಾಮಯ್ಯ

0
179

ತೀರ್ಥಹಳ್ಳಿ : ರಾಜಕೀಯ ದ್ವೇಷದಿಂದ ಇಡಿ ನೋಟಿಸ್ ನೀಡಲಾಗಿದೆ. ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ರಾಜಕೀಯ ಕಿರುಕುಳ ನೀಡಲು ಮಾಡುತ್ತಿದ್ದಾರೆ. ಇದು ಬಿಜೆಪಿಯ ಷಡ್ಯಂತ್ರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ತೀರ್ಥಹಳ್ಳಿಯ ಜೂನಿಯರ್ ಕಾಲೇಜಿನ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಈ ಹಿಂದೆಯೇ ತನಿಖೆ ಮಾಡಿ, ರಿಪೋರ್ಟ್ ಹಾಕಿದ್ದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆ 1938ರಲ್ಲಿ ನೆಹರೂ ಪ್ರಾರಂಭ ಮಾಡಿದ್ದು. ಅದರಲ್ಲಿ ಈ ಹಿಂದೆ ರಾಜೀವ್ ಗಾಂಧಿ, ಈಗ ಸೋನಿಯಾ ಹಾಗೂ ರಾಹುಲ್ ಎಲ್ಲರೂ ಟ್ರಸ್ಟಿಗಳಾಗಿದ್ದಾರೆ. ವಿಚಾರಣೆಯಲ್ಲಿ ಇರೋದು ಕೇವಲ ರಾಜಕೀಯ ದುರುದ್ದೇಶ ಅಷ್ಟೇ. ಅವರ ರಾಜಕೀಯ ವರ್ಚಸ್ಸು ಕಡಿಮೆ ಮಾಡಲು ಹೀಗೆ ಮಾಡುತ್ತಿದ್ದಾರೆ. ದೆಹಲಿ ಪೊಲೀಸರು ನೇರವಾಗಿ ಕೇಂದ್ರ ಗೃಹಮಂತ್ರಿಗಳ ಅಧೀನಕ್ಕೆ ಬರುತ್ತಾರೆ. ಹೀಗಾಗಿ, ಪ್ರತಿಭಟನಾನಿರತರನ್ನು ಪೊಲೀಸರ ಮೂಲಕ ಕೇಂದ್ರ ಸರ್ಕಾರ ಅರೆಸ್ಟ್ ಮಾಡಿಸುತ್ತಿದೆ.

ಡಿ.ಕೆ‌.ಸುರೇಶ್ ಅವರ ಓರ್ವ ಸಂಸದರು. ಜೊತೆಗೆ ದಿನೇಶ್ ಗುಂಡೂರಾವ್ ಸಚಿವರಾಗಿದ್ದವರು. ಅವರುಗಳ ಮೂಲಕ ಪೊಲೀಸರಿಂದ ಮ್ಯಾನ್ ಹ್ಯಾಂಡಲ್ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದು, ಹಕ್ಕುಗಳನ್ನು ಹತ್ತಿಕ್ಕುತ್ತಿದೆ. ಕಾನೂನು ಪ್ರಕಾರ ವಿಚಾರಣೆ ಮಾಡಲು ನನ್ನ ಅಡ್ಡಿಯಿಲ್ಲ. ರಾಜಕೀಯ ಯಾಕೆ..? ದೇಶದಲ್ಲಿ ಆಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಇವರುಗಳೇ ಈ ಹಿಂದೆ ತುರ್ತು ಪರಿಸ್ಥಿತಿಯ ವಿರುದ್ದ ಹೋರಾಟ ಮಾಡಿದ್ದರು. ಇಡಿ, ಐಟಿ ಎಲ್ಲವೂ ಇಂದು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಸ್ವತಂತ್ರ ಸಂಸ್ಥೆ ಕೈಗೊಂಬೆಯಾಗಿ ಕೆಲಸ ಮಾಡಬಾರದು ಎಂದರು.

ವರದಿ : ಅಕ್ಷಯ್ ಕುಮಾರ್
https://m.facebook.com/story.php?story_fbid=572614527567757&id=100044576433033
ಜಾಹಿರಾತು

LEAVE A REPLY

Please enter your comment!
Please enter your name here