23.2 C
Shimoga
Sunday, November 27, 2022

ರಿಪ್ಪನ್‌ಪೇಟೆಯಲ್ಲಿ ನ. 25 ರಿಂದ 26 ರವರೆಗೆ ಕಲಾಕೌಸ್ತುಭ ಕನ್ನಡ ಸಂಘದ 29ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ನಿಮಿತ್ತ ವಿವಿಧ ಸ್ಪರ್ಧಾ ಕಾರ್ಯಕ್ರಮ


ರಿಪ್ಪನ್‌ಪೇಟೆ: ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದ 29ನೇ ವರ್ಷದ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್ 25 ಮತ್ತು 26 ರಂದು ಎರಡು ದಿನಗಳ ಕಾಲ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಆರ್.ಎಲ್.ನಿರೂಪ್ ಹಾಗೂ ಕಾರ್ಯದರ್ಶಿ ರವಿ ತಿಳಿಸಿದ್ದಾರೆ.


ನವೆಂಬರ್ 25 ರಂದು ಶುಕ್ರವಾರ ಬೆಳಗ್ಗೆ 9 ಗಂಟೆಗೆ ತಾಯಿ ಭುವನೇಶ್ವರಿ ಅಲಂಕೃತ ಭಾವಚಿತ್ರ ಮೆರವಣಿಗೆ ಶಾಲಾ ಮಕ್ಕಳಿಗಾಗಿ ಭುವನೇಶ್ವರಿ ಹಾಗೂ ವಿವಿಧ ವೇಷ ಭೂಷಣಗಳೊಂದಿಗೆ, ವಿವಿಧ ಜಾನಪದ ಕಲಾತಂಡಗಳ ಭವ್ಯ ಮೆರವಣಿಗೆ ಏರ್ಪಡಿಸಲಾಗಿದೆ.


ಇದೇ ದಿನ ಮಧ್ಯಾಹ್ನ 2 ಗಂಟೆಗೆ ಪುರುಷರಿಗಾಗಿ ವಾಲಿಬಾಲ್ ಪಂದ್ಯಾವಳಿ, ಮಹಿಳೆಯರಿಗೆ ಥ್ರೋಬಾಲ್ ಮತ್ತು 1-2ನೇ ತರಗತಿ ಮಕ್ಕಳಿಗೆ ನೀತಿ ಕಥೆ ಹೇಳುವ ಸ್ಪರ್ಧೆ, 3-4ನೇ ತರಗತಿ ಮಕ್ಕಳಿಗೆ ಉಕ್ತಲೇಖನ ಸ್ಪರ್ಧೆ, 4-6ನೇ ತರಗತಿಯ ವಿದ್ಯಾರ್ಥಿಗಳಿಗೆ ಮಲೆನಾಡಿನ ಹಳ್ಳಿಯ ಚಿತ್ರಣ, 8-9-10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಜಾನುವಾರು ಸಂತೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ನಡೆಯಲಿದೆ.


ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ:

ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದವರು ನವೆಂಬರ್ 25 ರ ಸಂಜೆ ಜಿಲ್ಲಾ ಮಟ್ಟದ 16 ವರ್ಷ ಮೇಲ್ಪಟ್ಟವರಿಗೆ ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಜಾನಪದಗೀತೆ ಮತ್ತು ಭಾವಗೀತೆ ಹಾಗೂ ಸಮೂಹ ಕನ್ನಡನಾಡ ಗೀತೆಯ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಭಾಗವಹಿಸಲಿಚ್ಚಿಸುವವರು ನವೆಂಬರ್ 25 ರ ಮಧ್ಯಾಹ್ನ 3 ಗಂಟೆಯ ಒಳಗೆ ಹೆಸರು ನೊಂದಾಯಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೆಸರು ನೊಂದಾಯಿಸಿಕೊಳ್ಳುವವರು ಆರ್.ವಿ.ನಿರೂಪ್ 8722242237, ಪ್ರವೀಣ್ ಆಚಾರ್ 7259619104 ಈ ಮೊಬೈಲ್ ನಂಬರ್‌ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!