23.2 C
Shimoga
Sunday, November 27, 2022

ರಿಪ್ಪನ್‌ಪೇಟೆಯಲ್ಲಿ ನ. 26 ರಂದು ಹರಟೆ ಖ್ಯಾತಿಯ ರಿಚರ್ಡ್ ಲೂಯಿಸ್‌ ತಂಡದಿಂದ ಹಾಸ್ಯೋತ್ಸವ

ರಿಪ್ಪನ್‌ಪೇಟೆ: ಕಲಾಕೌಸ್ತುಭ ಕನ್ನಡ ಸಂಘದ 29ನೇ ವಾರ್ಷಿಕೋತ್ಸವ ಮತ್ತು ಕನ್ನಡರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಮಾರಂಭ ಮತ್ತು ಹರಟೆ ಮಲ್ಲ ಖ್ಯಾತಿಯ ರಿಚರ್ಡ್ ಲೂಯಿಸ್ ಮತ್ತು ಕಿರ್ಲೋಸ್ಕರ್ ಸತ್ಯ ಹಾಗೂ ಉಮೇಶ್ ಗೌಡ ಇವರ ಹಾಸ್ಯೋತ್ಸವ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಪ್ರಖ್ಯಾತಿಯ ಕಲಾವಿದರ ಹಾಸ್ಯಪ್ರಹಸನ ಕಾರ್ಯಕ್ರಮವು ನವೆಂಬರ್ 26 ರಂದು ಸಂಜೆ ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಆರ್.ವಿ.ನಿರೂಪ್ ಮತ್ತು ಕಾರ್ಯದರ್ಶಿ ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮಿಡಿ ಕಿಲಾಡಿಗಳು ಕಲಾವಿದರಾದ ಮನ್ನಣ್ಣ, ಸೀರುಂಡೆ ರಘು, ಸದಾ ಇವರಿಂದ `ಹಾಸ್ಯಪ್ರಹಸನ’ ಕಾರ್ಯಕ್ರಮಕ್ಕೆ ಕನ್ನಡಕಲಾಭಿಮಾನಿಗಳು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!