20.6 C
Shimoga
Friday, December 9, 2022

ರಿಪ್ಪನ್‌ಪೇಟೆಯಲ್ಲಿ ನ. 27 ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ; ಭರದ ಸಿದ್ಧತೆ


ರಿಪ್ಪನ್‌ಪೇಟೆ: ಇಲ್ಲಿನ ಆಳ್ವಾಸ್ ನುಡಿಸಿರಿ ವಿರಾಸತ್ ಮತ್ತು ಕಲಾಕೌಸ್ತುಭ ಕನ್ನಡ ಸಂಘ ಇವರ ಸಹಯೋಗದಲ್ಲಿ ನವೆಂಬರ್ 27 ರಂದು ಸಂಜೆ ಸಾಗರ ರಸ್ತೆಯಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜ್ ಚಿನ್ನೇಗೌಡ ಕ್ರೀಡಾಂಗಣದಲ್ಲಿ “ಆಳ್ವಾಸ್‌ ಸಾಂಸ್ಕೃತಿಕ ವೈಭವ’’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಳ್ವಾಸ್ ನುಡಿಸಿರಿ ವಿರಾಸತ್ ಸಂಚಾಲಕ ಎನ್.ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಳೆದ ನಾಲ್ಕು ವರ್ಷದ ಹಿಂದೆ ನಡೆದಂತಹ ಈ ಕಾರ್ಯಕ್ರಮ ಕೊರೊನಾ ಕಾರಣದಿಂದಾಗಿ ಹಿನ್ನಡೆಯಾಗಿತ್ತು. ಅಲ್ಲದೆ ಕಲಾಭಿಮಾನಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲದೆ ದೂರ ಉಳಿಯುವಂತಾಗಿತು. ಈ ಬಾರಿ ಮಲೆನಾಡಿನ ಹೃದಯ ಭಾಗವಾಗಿರುವ ಗ್ರಾಮೀಣ ಪ್ರದೇಶವಾದ ರಿಪ್ಪನ್‌ಪೇಟೆಯಲ್ಲಿ ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮ ನಾಲ್ಕನೇ ಪ್ರದರ್ಶನವಾಗಿದ್ದು ಈ ಪ್ರದರ್ಶನದಲ್ಲಿ ಆಂಧ್ರದ ಜನಪದ, ಬಂಜಾರ ನೃತ್ಯ, ಮಣಿಪುರಿ ಸ್ಟಿಕ್‌ಡ್ಯಾನ್ಸ್, ಶಾಸ್ತ್ರೀಯ ನೃತ್ಯ, ನವದುರ್ಗೆ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ಧೋಲ್ ಚಲಮ್, ಕಥಕ್ ನೃತ್ಯ, ನವರಂಗ್, ಪಶ್ಚಿಮ ಬಂಗಾಳದ ಪುರಿಲಿಯ ಸಿಂಹ ನೃತ್ಯ ಇನ್ನಿತರ ನೃತ್ಯ ಪ್ರದರ್ಶನಗಳು ಜರುಗಲಿವೆ.


ಈ ಸಾಂಸ್ಕೃತಿಕ ವೈಭವಕ್ಕೆ ಸಕಲ ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಅರ್.ವಿ.ನಿರೂಪ್, ಕಾರ್ಯದರ್ಶಿ ರವಿ, ಮಂಜನಾಯ್ಕ್, ಅರುಣ್ ಕಾಳಾಮುಖಿ, ಶ್ವೇತಾ, ಲೀಲಾಉಮಾಶಂಕರ್, ಉಮಾಸುರೇಶ್, ಎಂ.ಬಿ.ಮಂಜುನಾಥ, ಎಂ.ಸರೇಶ್‌ಸಿಂಗ್, ಪದ್ಮಸುರೇಶ್, ಶೈಲಾ ಆರ್.ಪ್ರಭು, ಹೆಚ್.ಸಿ.ಪರಶುರಾಮ, ಸಿ.ಚಂದ್ರುಬಾಬು, ಸುಧೀಂದ್ರ ಪೂಜಾರಿ, ಆರ್.ಟಿ.ಗೋಪಾಲ, ಸುಧೀರ್ ಪಿ, ಹಿರಿಯಣ್ಣ ಭಂಡಾರಿ, ಸೀತಾ, ಗೀತಾ ಇನ್ನಿತರ ಹಲವರು ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!