20.6 C
Shimoga
Friday, December 9, 2022

ರಿಪ್ಪನ್‌ಪೇಟೆಯ ಸುಧೀಂದ್ರ ಆರ್ ಪ್ರಭು (ಕಲ್ಲು ಬಾಬಣ್ಣ) ಇನ್ನಿಲ್ಲ !

ರಿಪ್ಪನ್‌ಪೇಟೆ : ಪಟ್ಟಣದ ಹೊಸನಗರ ರಸ್ತೆಯ ನಿವಾಸಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಹಾಗೂ ಸಪ್ತಗಿರಿ ಟ್ರೇಡರ್ಸ್ ಮಾಲೀಕ ಸುಧೀಂದ್ರ ಆರ್ ಪ್ರಭು ಯಾನೆ ಕಲ್ಲು ಬಾಬಣ್ಣ (62) ಅವರು ಬುಧವಾರ ಬೆಳಗ್ಗೆ 7 ಗಂಟೆಗೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.


4 ದಶಕಗಳಿಂದ ಮನೆ ಕಟ್ಟಡ ನಿರ್ಮಾಣದ ಸಾಮಗ್ರಿಗಳ ಮಾರಾಟದ ಮೂಲಕ ಎಲ್ಲರ ಚಿರಪರಿಚಿತರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಜನ ಮನ್ನಣೆ ಗಳಿಸಿದ್ದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ‌.

ಬಾಬಣ್ಣನವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಜನರು ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.

ಮೃತರ ಅಂತ್ಯಕ್ರಿಯೆಯು ಗಾಂಧಿನಗರದ ಹಿಂದೂ ರುದ್ರಭೂಮಿಯಲ್ಲಿ ಇಂದು ಸಂಜೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಂತಾಪ :
ರಿಪ್ಪನ್‌ಪೇಟೆ ಸಪ್ತಗಿರಿ ಟ್ರೇಡರ್ಸ್ ಮಾಲೀಕರಾದ ಸುಧೀಂದ್ರ ಆರ್.ಪ್ರಭು (ಕಲ್ಲು ಬಾಬಣ್ಣ) ರವರ ನಿಧನಕ್ಕೆ ಶಾಸಕ ಹೆಚ್.ಹಾಲಪ್ಪ ಹರತಾಳು ಹಾಗೂ ಜಿ.ಎಸ್. ಬಿ. ಸಮಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಸಂತಾಪ ಸೂಚಿಸಿದ್ದಾರೆ.

- Advertisement -

More articles

1 COMMENT

LEAVE A REPLY

Please enter your comment!
Please enter your name here

- Advertisement -

Latest article

error: Content is protected !!