23.2 C
Shimoga
Sunday, November 27, 2022

ರಿಪ್ಪನ್‌ಪೇಟೆ ; ಆಕರ್ಷಕ ಜಾನಪದ ಕಲಾತಂಡಗಳ ಮೆರಗಿನಲಿ 67ನೇ ಕನ್ನಡ ರಾಜ್ಯೋತ್ಸವದ ಅದ್ದೂರಿ ಮೆರವಣಿಗೆಯಲ್ಲಿ ಮೊಳಗಿದ ‘ಕನ್ನಡದ ಕಂಪು’


ರಿಪ್ಪನ್‌ಪೇಟೆ: 29ನೇ ವರ್ಷದ ಕಲಾಕೌಸ್ತುಭ ಕನ್ನಡ ಸಂಘದ ವಾರ್ಷಿಕೋತ್ಸವ ಹಾಗೂ 67ನೇ ಕನ್ನಡ ರಾಜ್ಯೋತ್ಸವ ಮತ್ತು ಡಾ.ಪುನಿತ್‌ರಾಜ್ ಸ್ಮರಣೋತ್ಸವ ಕಾರ್ಯಕ್ರಮ ಎತ್ತಿನಬಂಡಿಯ ಆಕರ್ಷಕ ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆಯೊಂದಿಗೆ ಕನ್ನಡದ ಕಂಪು ಎಲ್ಲೆಡೆ ವಿಜೃಂಭಿಸಿತು.


ಎಂ.ಬಿ.ಮಂಜುನಾಥ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆಗೆ ಚಾಲನೆ ನೀಡಿದರು.


ಈ ಮೆರವಣಿಗೆಯಲ್ಲಿ ಮುಗುಟಿಕೊಪ್ಪದ ಗಂಗಾಧರ ಗೌಡರ ಎತ್ತಿನಬಂಡಿ ಮತ್ತು ಆಟೋ ಚಾಲಕರಿಂದ ಕಸ್ತೂರಿ ಕರ್ನಾಟಕದ ಅಲಂಕಾರಿಕಾ ಆಟೋಗಳು ಸಾಗರ ತಾಲ್ಲೂಕಿನ ಹೆಗ್ಗೋಡು ನೀಲಕಂಠೇಶ್ವರ ಮಹಿಳೆಯರ ಡೊಳ್ಳು ಕುಣಿತ ಹಾಗೂ ಚಂಡೆ ಬಳಗ ಇವರಿಂದ ಚಂಡೆ ನೃತ್ಯ ಮೆರವಣಿಗೆಯ ಕಣ್ಮನ ಸೆಳೆಯಿತು.

ಶಾಲಾ ವಿದ್ಯಾರ್ಥಿಗಳ ಪಥಸಂಚಲನ ಮತ್ತು ಪುಟಾಣಿ ಮಕ್ಕಳ ಛದ್ಮವೇಷ ವಿವಿಧ ವೇಷ ಭೂಷಣಗಳು ಮೆರವಣಿಗೆಯ ಆಕರ್ಷಣೆಯಾಗಿ ಜನಮನಸೂರೆಗೊಳಿಸಿತು.


ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಅರ್.ಎಲ್.ನಿರೂಪ್, ಮಾಜಿ ಅಧ್ಯಕ್ಷ ಉಮಾಸುರೇಶ್, ಎಂ.ಬಿ.ಮಂಜುನಾಥ, ಎಂ.ಸುರೇಶ್ ಸಿಂಗ್, ಆರ್.ಟಿ.ಗೋಪಾಲ್, ಕಾರ್ಯಾಧ್ಯಕ್ಷ ಎನ್.ಸತೀಶ್,ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳ ಕೇತಾರ್ಜಿರಾವ್,ಉಪಾಧ್ಯಕ್ಷೆ ಮಹಾಲಕ್ಷ್ಮಿ, ಗಣೇಶ್ ಎನ್.ಕಾಮತ್, ಪ್ರವೀಣ್ ಅಚಾರ್,ಲೀಲಾ ಶಂಕರ್, ಅಶ್ವಿನಿ, ಪದ್ಮಸುರೇಶ್, ಅಜೇಯ್, ಕಾರ್ತೀಕ್ ಅಚಾರ್, ಸುನೀಲ್, ಆರ್.ಈ.ಓಈಶ್ವರಶೆಟ್ಟಿ, ಗ್ರಾಮ ಪಂಚಾಯ್ತಿ ಅಡಳಿತ ವರ್ಗ ಸೇರಿದಂತೆ ಶಾಲಾ ಕಾಲೇಜ್ ಇನ್ನಿತರ ಶಿಕ್ಷಣ ಸಂಸ್ಥೆಯವರು

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!