24.3 C
Shimoga
Friday, December 9, 2022

ರಿಪ್ಪನ್‌ಪೇಟೆ ; ಬೀಡಿ ಜೊತೆ ಗಾಂಜಾ ಸೇರಿಸಿ ಸೇವಿಸಿ ಅಮಲಿನಲ್ಲಿದ್ದ ವ್ಯಕ್ತಿ ಅಂದರ್ !

ರಿಪ್ಪನ್‌ಪೇಟೆ : ಬೀಡಿ ಜೊತೆ ಗಾಂಜಾ ಸೇರಿಸಿ ಸೇವಿಸಿ ಅಮಲಿನಲ್ಲಿದ್ದ ವ್ಯಕ್ತಿಯನ್ನು ರಿಪ್ಪನ್‌ಪೇಟೆ ಪೊಲೀಸರು ಇಂದು ಬಂಧಿಸಿದ್ದಾರೆ.

ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ಶಿವಾನಂದ ಕೋಳಿಯವರು ಹೆಡ್ ಕಾನ್ಸ್‌ಸ್ಟೇಬಲ್ ಉಮೇಶ್ ರವರೊಂದಿಗೆ ಇಂದು ಇಲಾಖೆ ಜೀಪ್ ನಲ್ಲಿ ಠಾಣಾ ವ್ಯಾಪ್ತಿಯ ಬೆನವಳ್ಳಿ ಗ್ರಾಮದ ಸಿದ್ಧಪ್ಪನಗುಡಿ ಹತ್ತಿರ ಗಸ್ತು ಸಂಚರಿಸುತ್ತಿರುವಾಗ ಬೆಳಗ್ಗೆ 10:45 ರ ಸುಮಾರಿಗೆ ಓರ್ವ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ
ವರ್ತಿಸುತ್ತಿದ್ದವನನ್ನು ಕಂಡು ಆತನ ಬಳಿ ಹೋಗಿ ಆತನನ್ನು ವಿಚಾರಿಸಿದಾಗ ಡ್ರೈವಿಂಗ್ ಕೆಲಸ ಮಾಡುತ್ತಿರುವ ಬೆನವಳ್ಳಿ ಗ್ರಾಮದ ಸಿದ್ದಪ್ಪನಗುಡಿ ನಿವಾಸಿ ಸಿದ್ಧೇಶ ಬಿ.ಜಿ (23) ಎಂಬುದಾಗಿ ತಿಳಿಸಿದ್ದಾನೆ. ಆತನ ಮಾತು ತೊದಲುತ್ತಿದ್ದು ಬಾಯಿಯಿಂದ ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ ಆತನನ್ನು ಕೂಲಂಕುಷವಾಗಿ ವಿಚಾರಿಸಿದಾಗ ಬೀಡಿ ಜೊತೆ ಗಾಂಜಾ ಸೇರಿಸಿ ಸೇದಿದ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ನಂತರ ಆತನನ್ನು ವೈದ್ಯಕೀಯ ತಪಾಸಣೆಗೆ ಮೆಗಾನ್ ಆಸ್ಪತ್ರೆಗೆ
ಕಳುಹಿಸಿಕೊಟ್ಟಿದ್ದು ಆತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಆರೋಪಿಯನ್ನು ಬಂಧಿಸಿದ್ದು ಈತನ ವಿರುದ್ಧ ಮಾದಕ ದ್ರವ್ಯ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!