ರಿಪ್ಪನ್‌ಪೇಟೆಯಲ್ಲಿ ಏ.01 ರಂದು ಡಾ. ಶಿವಕುಮಾರ ಮಹಾಸ್ವಾಮಿಗಳವರ 115ನೇ ವರ್ಷದ ಜನ್ಮದಿನಾಚರಣೆ

0
199

ರಿಪ್ಪನ್‌ಪೇಟೆ : ನಡೆದಾಡುವ ದೇವರು ತ್ರಿವಿಧ ದಾಸೋಹಿ ಸತಾಯಿಸಿ ಕಾಯಕಯೋಗಿ ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು 115ನೇ ವರ್ಷದ ಜನ್ಮದಿನಾಚರಣೆಯನ್ನು ಏಪ್ರಿಲ್ 1 ಶುಕ್ರವಾರದಂದು ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಡಾ. ಶಿವಕುಮಾರ ಮಹಾಸ್ವಾಮಿಗಳವರ ಭಕ್ತ ವೃಂದದವರು ತಿಳಿಸಿದ್ದಾರೆ.

ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ಕಗ್ಲಿ ನಿಂಗಪ್ಪ ಮಾತನಾಡಿ, ಶುಕ್ರವಾರದಂದು ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಶ್ರೀಗಳ 115ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ಮತ್ತು ಆಶೀರ್ವಚನವನ್ನು ಶ್ರೀಶೈಲ ಶಾಖಾ ಶ್ರೀ ಶಿವಲಿಂಗೇಶ್ವರ ಬ್ರಹನ್ಮಠ ಕೋಣಂದೂರಿನ ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನೀಡಲಿದ್ದಾರೆ.

ಈ ಸಮಾರಂಭದಲ್ಲಿ ಸಮಾಜ ಸೇವಕರಾದ ಹೆಚ್.ಎಲ್.ಚಂದ್ರಶೇಖರ್, ಅಂತರಾಷ್ಟ್ರೀಯ ಯೋಗಪಟು ಕುಮಾರಿ ಕಾವ್ಯ ಕೆ. ಎನ್. ಸನ್ಮಾನಿಸಿ ಗೌರವಿಸಲಾಗುವುದು ಎಂದ ಅವರು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕಾಗಿ ಈ ಸಂದರ್ಭದಲ್ಲಿ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ, ಆಶಿಫ್, ಜನಜಾಗೃತಿ ವೇದಿಕೆ ಅಧ್ಯಕ್ಷ ಟಿ. ಆರ್.ಕೃಷ್ಣಪ್ಪ, ಬಸಪ್ಪ ಬಿ. ಹೆಚ್, ಜಂಬಳ್ಳಿ ಸದಾನಂದ, ಕಗ್ಲಿ ಲಿಂಗಪ್ಪ, ಸತೀಶ್ ಹೆಗಡೆ ಶಾಂತಕುಮಾರ್, ಧರ್ಮರಾಜ್, ಕೊಳವಳ್ಳಿ ರಮೇಶ್, ದೂನ ಸೋಮಶೇಖರ್ ಇನ್ನಿತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here