ರಿಪ್ಪನ್ಪೇಟೆ: ಮೇ.9 ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಡಿ.ಬಿ.ಶಂಕರಪ್ಪ ಎರಡನೇ ಅವಧಿಗೆ ಪುನರ್ ಆಯ್ಕೆ ಬಯಸಿ ಸ್ಪರ್ಧಿಸಿದ್ದು ಇಂದು ರಿಪ್ಪನ್ಪೇಟೆ ಕಸಾಪ ಹೋಬಳಿ ಘಟಕದ ಮತದಾರರ ಮನೆಬಾಗಿಲಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.
ಕಳೆದ ಅವಧಿಯಲ್ಲಿ ಜಿಲ್ಲೆಯಲ್ಲಿ ಕಸಾಪ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಮೂಲಕ ರಾಜ್ಯದಲ್ಲಿ ಮಾದರಿಯಾಗಿದೆ ಅದರಂತೆ ಕಸಾಪ ಅಭಿಮಾನಿಗಳ ಒತ್ತಾಸೆಯಂತೆ ಪುನಃ ಸ್ಪರ್ಧೆಗೆ ಇಳಿಯುವಂತಾಗಿದ್ದು ಕಳೆದ ಭಾರಿಯಂತೆ ನನಗೆ ತಾವು ಬೆಂಬಲಿಸಿ ಮತ ನೀಡಿದರೆ ಮುಂದೆ ಜಿಲ್ಲೆಯಲ್ಲಿನ ಕಸಾಪ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಹರಿಯುವ ನೀರಿನಂತಾಗಿ ಕ್ರೀಯಾಶೀಲಗೊಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಗಂಗಾಧರಯ್ಯ, ಜಗದೀಶ್ ಕಾಗಿನಲೆ, ಎಂ.ಸುರೇಶ್ ಸಿಂಗ್, ದೇವೇಂದ್ರಪ್ಪಗೌಡ ನೆವಟೂರು, ನಾಗರಾಜ್ ಇನ್ನಿತರ ಹಲವರು ಜೊತೆಯಲ್ಲಿದ್ದರು.
Related