ರಿಪ್ಪನ್‌ಪೇಟೆಯಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0
441

ರಿಪ್ಪನ್‌ಪೇಟೆ: ರಾಜ್ಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ ಜನಸಾಮಾನ್ಯರ ಪಕ್ಷವಾಗಿದೆ. ಅವರು ಸದಾ ಜನರ ಮೂಲಭೂತ ಸಮಸ್ಯೆಗಳ ಕುರಿತು ಹೋರಾಟ ನಡೆಸುವುದು ನೀರಾವರಿ ಯೋಜನೆ ಬಗ್ಗೆ ಚಿಂತನೆ ನಡೆಸುವುದರೊಂದಿಗೆ ಮಣ್ಣಿನ ಮಕ್ಕಳಾಗಿದ್ದಾರೆಂದು ರಾಜ್ಯ ಜೆಡಿಎಸ್ ಮುಖಂಡ ಆರ್.ಎ.ಚಾಬುಸಾಬ್ ಹೇಳಿದರು.

ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಕುವೆಂಪು ಸಭಾಭವನದಲ್ಲಿ ಆಯೋಜಿಸಲಾದ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬರುವ 2023 ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜನತಾದಳ ಸರ್ಕಾರ ರಚಿಸುವ ಸೂಚನೆ ಕಾಣುತ್ತಿದ್ದು ಅಡಳಿತ ಬಿಜೆಪಿ ಸರ್ಕಾರದ ದುರಾಡಳಿತ ಮತ್ತು ಕಾಂಗ್ರೆಸ್ ಒಳಜಗಳದಿಂದಾಗಿ ಮತದಾರರು ಇಂತಹ ಜನವಿರೋಧಿ ಸರ್ಕಾರವನ್ನು ಕಿತ್ತೆಸೆದು ಅಭಿವೃದ್ಧಿ ಪರ ಸರ್ಕಾರವನ್ನು ಅಧಿಕಾರಕ್ಕೆ ತರುವುದರ ಬಗ್ಗೆ ರಾಜ್ಯದ ಮತದಾರರು ಒಲವು ವ್ಯಕ್ತಪಡಿಸುತ್ತಿದ್ದಾರೆ.

ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಮೂಲ ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಮುಖಂಡ ಜಿ.ಎಸ್.ವರದರಾಜ್, ಎನ್.ವರ್ತೇಶ್,ಜನಪರ ಹೋರಾಟ ವೇದಿಕೆ ಅಧ್ಯಕ್ಷ ಹಾಗೂ ಪಕ್ಷದ ಮುಖಂಡ ಅರ್.ಎನ್. ಮಂಜುನಾಥ, ಕಲ್ಲೂರು ಈರಣ್ಣ, ಮಂಜುನಾಥಆಚಾರ್, ಬರುವೆ ಕಮಲಮ್ಮ, ಅನಿತಾ ಪುಷೋತ್ತಮ್, ಚಂದಳ್ಳಿ ದೇವರಾಜ್, ಮಂಜೋಜಿ ರಾವ್‌ ಕೆರೆಹಳ್ಳಿ, ಚಂದಳ್ಳಿ ರಾಘವೇಂದ್ರ, ಕೆ.ಬಿ.ನಟರಾಜ್,ಇನ್ನಿತರರು ಹಾಜರಿದ್ದರು.

ನೇಮಕ:

ಬಾಳೂರು ಗ್ರಾಮ ಪಂಚಾಯಿತ್ ಜನತಾದಳ ಯುವ ಸಮಿತಿ ಅಧ್ಯಕ್ಷರನ್ನಾಗಿ ಚಂದಳ್ಳಿ ದೇವರಾಜ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಯಿತು.

ಎನ್.ವರ್ತೇಶ್ ಸ್ವಾಗತಿಸಿದರು. ಜಿ.ಎಸ್.ವರದರಾಜ್ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here