ರಿಪ್ಪನ್‌ಪೇಟೆಯಲ್ಲಿ ಪಂಚಾಯತ್ ದಿವಸ್ ಅಭಿಯಾನಕ್ಕೆ ಚಾಲನೆ

0
263

ರಿಪ್ಪನ್‌ಪೇಟೆ: ಸ್ಥಳೀಯಾಡಳಿತ ಬಲಿಷ್ಟವಾಗಬೇಕು. ಸರ್ಕಾರದ ಸವಲತ್ತು ಸುಲಭವಾಗಿ ಶ್ರೀಸಾಮಾನ್ಯರಿಗೆ ತಲುಪಬೇಕು. ಜನರನ್ನು ಶೋಷಣೆ ಮಾಡದೆ ನಿತ್ಯ ಕಛೇರಿಗೆ ಅಲೆದಾಡಿಸುವ ಬದಲು ಅವರಿಗೆ ಸುಲಭದಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರಕರಣದ ಮೂಲಕ ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು ಇಂದು ದೇಶದ ಪ್ರಧಾನಿ ಮೋದಿಜೀಯವರು ಕಾಶ್ಮೀರದಲ್ಲಿ ಪಂಚಾಯತ್ ದಿವಸ್ ಅಭಿಯಾನಕ್ಕೆ ಚಾಲನೆ ನೀಡಿ ದೇಶವನ್ನುದ್ದೇಶಿಸಿ ನೇರ ಸಂಭಾಷಣೆ ಮಾಡಿರುವುದಾಗಿ ಮಾಜಿ ಸಚಿವ, ಹಾಲಿ ಶಾಸಕ ಹರತಾಳು ಹಾಲಪ್ಪ ಹೇಳಿದರು.

ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ದೇಶದ ಪ್ರಧಾನಿ ನರೇಂದ್ರಮೋದಿಯವರ ಪಂಚಾಯತ್ ದಿವಸ್ ಅಭಿಯಾನದ ನೇರ ಪ್ರಸಾರವನ್ನು ವೀಕ್ಷಿಸಿ ಮಾತನಾಡಿ, ಗ್ರಾಮ ಪಂಚಾಯ್ತಿಗಳು ಅತ್ತೆ, ಮಾವ, ತವರು ಮನೆಯಲ್ಲ ಅಗತ್ಯ ಕೆಲಗಳಿದ್ದರೆ ಮಾತ್ರ ಜನರು ತಮ್ಮಲ್ಲಿಗೆ ಬರುತ್ತಾರೆ ಅವರ ಕೆಲಸವನ್ನು ಸಕಾಲದಲ್ಲಿ ಮಾಡಿ ಕಳುಹಿಸಿದರೆ ತಮಗೂ ಮತ್ತು ಅವರಿಗೂ ಒಳ್ಳೆಯ ಸಂಪರ್ಕ ಬೆಳೆಯಲು ಸಾಧ್ಯ. ಸಾರ್ವಜನಿಕರ ಸೇವೆಗಾಗಿ ಸರ್ಕಾರವಿದ್ದು ಗ್ರಾಮ ಪಂಚಾಯ್ತಿಯೇ ಸ್ಥಳೀಯ ಸರ್ಕಾರ ಪಂಚಾಯ್ತಿ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯಿಂದಾಗಿ ಜನತೆ ತಮ್ಮ ಮೂಲಭೂತ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲಿ ಪರಿಹರ ಕಂಡುಕೊಳ್ಳುಲು ಸಾಧ್ಯವಾಗಿದೆ ಕೆಲವು ಕಾನೂನಿನ ಅರಿವಿಲ್ಲದೆ ದುರಾಡಳಿತ ನಡೆದಸುವ ಮೂಲಕ ನಿತ್ಯ ಕಛೇರಿಗಳಿಗೆ ಅಲೆದಾಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಇನ್ನಾದರೂ ಈ ರೀತಿಯಲ್ಲಿ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುವುದೆಂದ ಅವರು, ಈಗಾಗಲೇ ಮಹಿಳೆಯರಿಗೂ ಸಮಾನತೆ ನೀಡಿರುವುದಾಗಿ ವಿವರಿಸಿ ಲೋಕಜ್ಞಾನ. ವ್ಯವಹಾರ ಜ್ಞಾನ ಸಾಮಾನ್ಯ ಜ್ಞಾನಹೊಂದಿರುವುದರಿಂದ ಅವರು ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಗ್ರಾಮ ಪಂಚಾಯ್ತಿನ ವಿಶೇಷ ಸಭೆಯಲ್ಲಿ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ಅವಧಿಯಲ್ಲಿ ಇಲ್ಲಿನ ಪೊಲೀಸ್ ವಸತಿ ನಿಲಯಕ್ಕೆ ತೆರಳುವ ರಸ್ತೆ ಸಂಪೂರ್ಣ ನಾದರಸ್ತಾಗಿದೆ ಈ ಬಗ್ಗೆ ಉದ್ಯೋಗಖಾತ್ರಿ ಯೋಜನೆಯಡಿ ಕ್ರೀಯಾಯೋಜನೆ ಸಿದ್ದಪಡಿಸಿ ಕಾಮಗಾರಿ ನಿರ್ವಹಿಸುವಂತೆ ಆದೇಶಿಸಲಾದರೂ ಅವರ ಅದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಇದೊಂದು ಗಂಟು ಹೊಡೆಯುವ ಹುನ್ನಾರ ಎಂದು ಹೇಳಿದಾಗ ತಾ.ಪಂ.ಇಓ ಪ್ರವೀಣ್ ಪಿಡಿಓರನ್ನು ಕರೆದು ತಕ್ಷಣ ಕಾಮಗಾರಿ ನಿರ್ವಹಿಸುವಂತೆ ಸೂಚಿಸಿದಾಗ ಸಮಧಾನದಿಂದ ಹೊರನಡೆದರು.

ಇನ್ನೋರ್ವ ಹೋರಾಟಗಾರ ಅರ್.ಎನ್.ಮಂಜುನಾಥ ಮಾತನಾಡಿ, ಈ ಯೋಜನೆಯ ಉದ್ದೇಶವೇನು ಪಂಚಾಯ್ತಿ ಸದಸ್ಯರಿಗೆ ಸರಿಯಾದ ಮಾಹಿತಿ ಇರುವುದಿಲ್ಲ ಇನ್ನು ಹಲವರು ಅಂಬೇಡ್ಕರ್ ಜಯಂತಿ ಇನ್ನಿತರ ರಾಷ್ಟ್ರೀಯ ಹಬ್ಬಗಳ ಅಚರಣೆಗೆ ಗೈರು ಹಾಜರಾಗುತ್ತಾರೆ ಈ ಬಗ್ಗೆ ತಾವು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಬ್ಯಾಂಕ್ ಅಧಿಕಾರಿಗಳು ಭಾಷೆ ಬಾರದವರನ್ನು ವರ್ಗಾಯಿಸಿರುವ ಕಾರಣ ಕಿಸಾನ್ ಕಾರ್ಡ್ ಮತ್ತು ಸಾಲದ ಕುರಿತು ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ ಎಂದು ತರಾಟೆಗೆ ತಗೆದುಕೊಂಡರು.

ಗ್ರಾಪಂ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸುಧೀಂದ್ರ ಪೂಜಾರಿ, ಡಿ.ಈ.ಮಧುಸೂದನ್, ದೀಪಾ, ಅಶ್ವಿನಿ, ವೇದಾವತಿ, ವನಮಾಲ, ದಾನಮ್ಮ, ನಿರೂಪ್, ಗಣಪತಿ, ಜಿ.ಡಿ.ಮಲ್ಲಿಕಾರ್ಜುನ, ಆರ್.ಟಿ.ಗೋಪಾಲ್, ಆಸಿಫ್, ಪ್ರಕಾಶ್ ಪಾಲೇಕರ್, ಎಂ.ಬಿ.ಮಂಜುನಾಥ, ಮೆಣಸೆ ಆನಂದ, ತಾ.ಪಂ.ಇಓ ಪ್ರವೀಣ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಎಂ.ನಾಗರಾಜ್, ಕೃಷಿ ಸಹಾಯಕ ನಿರ್ದೇಶಕರು ಜಿ.ಪಂ.ಸ.ಕಾ.ಪಾ. ಅಭಿಯಂತರರು, ಬ್ಯಾಂಕ್ ಅಧಿಕಾರಿಗಳು ಮತ್ತು ಬಿಸಿಎಂ ಇಲಾಖೆಯ ಮೇಲ್ವಿಚಾರಕಿ ಸುಮಿತ್ರಬಾಯಿ,ಆಶಾ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here