ರಿಪ್ಪನ್‌ಪೇಟೆಯಲ್ಲಿ ಯಶಸ್ವಿಯಾದ ಭಾರತ್ ಬಂದ್

0
520

ರಿಪ್ಪನ್‌ಪೇಟೆ: ನಿತ್ಯ ತೈಲಬೆಲೆ ಏರಿಕೆ ಹಾಗೂ ರೈತ ವಿರೋಧಿ ಶಾಸನ ಅನುಷ್ಟಾನ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯಲ್ಲಿ ಖಂಡಿಸಿ ಸಂಯಕ್ತ ಕಿಸಾನ್ ಮೋರ್ಚಾ ಇಂದು ಕರೆ ನೀಡಲಾದ ಭಾರತ್‌ ಬಂದ್‌ಗೆ ರಿಪ್ಪನ್‌ಪೇಟೆ ಸಂಪೂರ್ಣ ಬಂದ್ ಆಚರಿಸುವ ಮೂಲಕ ಪ್ರತಿಭಟನಾ ನಿರತರು ವಿನಾಯಕ ವೃತ್ತದ ಮೂಲಕ ಹೊಸನಗರ ರಸ್ತೆ ಮತ್ತು ಶಿವಮೊಗ್ಗ ರಸ್ತೆಯಲ್ಲಿ ಮೆರವಣಿಗೆ ನಡೆಸಿ ನಾಡಕಛೇರಿಗೆ ತೆರಳಿ ಉಪತಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಕೇಂದ್ರದ ಮೋಧಿ ಸರ್ಕಾರ ಅನೈತಿಕ ಸರ್ಕಾರ ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿಯುವ ಮೂಲಕ ದೇಶವನ್ನು ದಿವಾಳಿಯಂಚಿಗೆ ತಲುಪಿಸಿದೆ ಅಲ್ಲದೆ ಇಂತಹ ಜನವಿರೋಧಿ ರೈತ ವಿರೋಧಿ ಸರ್ಕಾರವನ್ನು ಕಿತ್ತು ಎಸೆಯಬೇಕು ಎಂದು ಹೇಳಿ ಕಳೆದ ವರ್ಷದಲ್ಲಿ ರಾಷ್ಟ್ರಪತಿಯವರು ಕೃಷಿ ಮಸೂದೆಯನ್ನು ಕೈಬಿಡುಲು ಕೋರಿ ಎಪಿಎಂಸಿ ಕಾನೂನು ತಿದ್ದುಪಡಿ ವಿದ್ಯುತ್ ಖಾಸಗಿ ಕರಣ ಮಾಡದಂತೆ ಕೋರಿ ಗಗಕ್ಕೇರುತ್ತಿರುವ ದಿನನಿತ್ಯದ ಅಗತ್ಯ ವಸ್ತುಗಳ ರೈತರ ಜೀವನಾಡಿಯಾಗಿರುವ ಡಿಸೇಲ್ ಬೆಲೆಯಲ್ಲಿ ಲೀಟರ್‌ಗೆ 25 ಇಳಿಸಲು ಕೋರಿ ಹಾಗೂ ದೇವಾಲಯ ಮಸೀದಿ ಚರ್ಚ್ ಗಳನ್ನು ರಕ್ಷಣೆ ಮಾಡುವಂತೆ ಆಗ್ರಹಿಸಿ ರಾಜ್ಯ ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್, ಹೊಸನಗರ ತಾಲ್ಲೂಕು ರೈತ ಮುಖಂಡ ಸುಗಂಧರಾಜ್ ಕಲ್ಮಕ್ಕಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೇಸ್ ಮುಖಂಡ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಬಂಡಿ ರಾಮಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಎನ್.ಚಂದ್ರೇಶ್, ಡಿ.ಈ.ಮಧುಸೂಧನ್, ಜನಪರ ಹೋರಾಟ ಸಮಿತಿ ಅಧ್ಯಕ್ಷ ಆರ್.ಎನ್.ಮಂಜುನಾಥ, ರಿಪ್ಪನ್‌ಪೇಟೆ ಹೋಬಳಿ ಘಟಕ ಕಾಂಗ್ರೆಸ್ ಅಧ್ಯಕ್ಷ ಆಸೀಫ್, ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಬೇದುಲ್ಲಾ ಷರೀಫ್, ಕೆ.ಚಿ.ತೇಜಮೂರ್ತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಗೌರಮ್ಮ, ತಾ.ಪಂ.ಮಾಜಿ ಸದಸ್ಯೆ ಗೀತಾ ನಿಂಗಪ್ಪ, ಅಮ್ಮೀರ್‌ಹಂಜಾ, ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅರ್.ಎನ್.ಮಂಜಪ್ಪ, ಜೆಡಿಎಸ್ ರೈತ ಮೋರ್ಚ್ ಮುಖಂಡ ಮುಡುಬ ಧರ್ಮಪ್ಪ,ಕುಕ್ಕಳಲೇ ಈಶ್ವರಪ್ಪ,ಗ್ರಾಮ ಪಂಚಾಯ್ತಿ ಸದಸ್ಯೆ ಸಾರಬಿ, ಗಣಪತಿ, ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಎಲ್ಲಾ ಇಲಾಖೆಗಳನ್ನು ಖಾಸಗಿಕರಣಗೊಳಿಸುವ ಸರ್ಕಾರದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡ ಅವರು ಇಂತಹ ಭ್ರಷ್ಟ ಹೀನ ಸರ್ಕಾರವನ್ನು ತಕ್ಷಣ ವಜಾಗೊಳಿಸುವಂತೆ ಒತ್ತಾಯಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here