ರಿಪ್ಪನ್‌ಪೇಟೆಯ ವಿವಿದಢೆ ಸಡಗರ ಸಂಭ್ರಮದೊಂದಿಗೆ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

0
378

ರಿಪ್ಪನ್‌ಪೇಟೆ: 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಿಪ್ಪನ್‌ಪೇಟೆ ವಿವಿದಢೆಯಲ್ಲಿ ಸಡಗರ ಸಂಭ್ರಮದೊಂದಿಗೆ ಆಚರಿಸಲಾಯಿತು.

ಹೋಬಳಿ ಕಛೇರಿಯಲ್ಲಿ ಉಪತಹಶೀಲ್ದಾರ್ ಟಿ.ಹುಚ್ಚರಾಯಪ್ಪ, ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಶಿವಾನಂದಕೋಳಿ, ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ನಲ್ಲಿ ಪ್ರಾಚಾರ್ಯ ಪ್ರೋ.ಚಂದ್ರಶೇಖರ್, ಪದವಿ ಪೂರ್ವ ಕಾಲೇಜ್‌ನಲ್ಲಿ ಪ್ರಾಚಾರ್ಯ ಮಂಜುನಾಥ, ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ಈಶ್ವರ ಮಳಕೊಪ್ಪ, ಶ್ರೀಬಸವೇಶ್ವರ ಪಾಠಶಾಲೆಯಲ್ಲಿ ಸಿಡಿಸಿ ಅಧ್ಯಕ್ಷ ಸೋಮಶೇಖರ್, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಅನಿಲ್ ಕುಮಾರ್, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜಪ್ಪ, ರೈತ ಸಂಪರ್ಕ ಕೇಂದ್ರದಲ್ಲಿ ರಾಜೇಶ್, ಬಿಸಿಎಂ ಹಾಸ್ಟಲ್‌ನಲ್ಲಿ ಮೇಲ್ವಿಚಾರಕಿ ಸಾವಿತ್ರಿಬಾಯಿ (ಸುಮಿತ್ರ ಬಾಯಿ), ಎಸ್.ಸಿ., ಎಸ್.ಟಿ.ವಿದ್ಯಾರ್ಥಿ ನಿಲಯದಲ್ಲಿ ಮೇಲ್ವಿಚಾರಕ ರಾಘವೇಂದ್ರ, ಜುಮ್ಮಾ ಮಸೀದಿಯಲ್ಲಿ ಧರ್ಮಗುರುಗಳು, ಗುಡ್‌ಶಫಡ್ ಶಾಲೆಯಲ್ಲಿ ಸಿಡಿಸಿ ಅಧ್ಯಕ್ಷರು ಉಪಾಧ್ಯಕ್ಷ ದೇವೇಂದ್ರಪ್ಪಗೌಡ ನೆವಟೂರು ಹಾಗೂ ಜಂಬಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಜೆ.ಎಂ.ಶಾಂತಕುಮಾರ್, ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಗ್ರಾಮಾಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಕೆನರಾ ಬ್ಯಾಂಕ್ ವ್ಯವಸ್ಥಾಪಕರು, ವಿಜಯಬ್ಯಾಂಕ್, ಎಸ್.ಬಿ.ಐ.ಶಾಖೆಯಲ್ಲಿ, ಅರಸಾಳು ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ, ಮೂಗುಡ್ತಿ ವನ್ಯಜೀವಿ ವಿಭಾಗದ ವಲಯ ಅರಣ್ಯಾ ಕಛೇರಿಯಲ್ಲಿ, ಹಾಲು ಉತ್ಪಾದಕರ ಕಛೇರಿಯಲ್ಲಿ, ಹೆದ್ದಾರಿಪುರ, ಅರಸಾಳು, ಬೆಳ್ಳೂರು, ಹುಂಚ, ಅಮೃತ ಬಾಳೂರು, ಕೆಂಚನಾಲ, ಹರತಾಳು, ಕೋಡೂರು, ಚಿಕ್ಕಜೇನಿ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮಾಧ್ಯಕ್ಷರು ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸಲ್ಲಿಸಿದರು.

ನಂತರ ಶಾಲಾ ಕಾಲೇಜ್ ಅಂಗನವಾಡಿ ರಾಷ್ಟ್ರೋತ್ಥಾನ ಮಕ್ಕಳ ಪಥಸಂಚಲನ ಸಾರ್ವಜನಿಕರನ್ನು ಆಕರ್ಷಿಸಿತು.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಎಂ.ಡಿ.ಇಂದ್ರಮ್ಮ, ವಾಣಿ ಗೋವಿಂದಪ್ಪಗೌಡ, ಜಯಲಕ್ಷ್ಮಿ, ಟಿ.ಆರ್.ಕೃಷ್ಣಪ್ಪ, ಆರ್.ಎ.ಚಾಬುಸಾಬ್, ಆರ್.ಟಿ.ಗೋಪಾಲ್, ಆರ್.ರಾಘವೇಂದ್ರ, ಜಿ.ಎಸ್.ವರದರಾಜ್, ಹೆಚ್.ಎನ್.ಚೋಳರಾಜ್ ಜಿ.ಆರ್.ಗೋಪಾಲಕೃಷ್ಣ, ರೈತ ಮುಖಂಡ ಅರ್.ಎನ್.ಮಂಜಪ್ಪ, ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ ಇನ್ನಿತರ ಹಲವು ಗಣ್ಯರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here