ರಿಪ್ಪನ್‌ಪೇಟೆ: ಅರಸಾಳು ಅಕ್ಷತಾಗೆ ವಿಟಿಯು ಪಿ.ಎಚ್.ಡಿ

0
1045

ರಿಪ್ಪನ್‌ಪೇಟೆ: ಹೊಸನಗರ ತಾಲೂಕು ಅರಸಾಳುವಿನವರಾದ ಎನ್.ಡಿ.ಅಕ್ಷತಾ ಪುರುಷೋತ್ತಮ್ ಅವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಪಿಎಚ್ ಡಿ ಪದವಿ ನೀಡಿದೆ.

ಬೆಂಗಳೂರಿನ ಆರ್.ವಿ ಎಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕಾರದ ಡಾ. ನಾಗಶ್ರೀ ಎನ್ ರಾವ್ ಅವರ ಮಾರ್ಗದರ್ಶನದಲ್ಲಿ ಅಕ್ಷತಾ ಸಲ್ಲಿಸಿದ ಪ್ರಬಂಧವನ್ನು ಅಂಗೀಕರಿಸಲಾಗಿದೆ ಎಂದು ವಿಟಿಯು ಕುಲಸಚಿವ ಡಾ.ಬಿ.ಇ.ರಂಗಸ್ವಾಮಿ ತಿಳಿಸಿದ್ದಾರೆ.

ರಿಪ್ಪನ್‌ಪೇಟೆ ಸಮೀಪದ ಅರಸಾಳು ಮೂಲದ ಸದ್ಯ ಶಿವಮೊಗ್ಗದಲ್ಲಿ ನೆಲೆಸಿರುವ ಅಂಚೆ ನಿವೃತ್ತ ಅಧಿಕಾರಿ ಎನ್.ದತ್ತಾತ್ರಿ, ಗೃಹಿಣಿ ಉಮಾದತ್ತಾತ್ರಿ ಅವರ ಪುತ್ರಿಯಾದ ಅಕ್ಷತಾ ಬೆಂಗಳೂರಿನಲ್ಲಿ ಉಪನ್ಯಾಸಕಿಯಾಗಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here