ರಿಪ್ಪನ್‌ಪೇಟೆ ; ಉದ್ಘಾಟನೆಗೊಂಡ ಹೈಟೆಕ್ ಸಮುದಾಯ ಶೌಚಾಲಯ

0
483

ರಿಪ್ಪನ್‌ಪೇಟೆ: ಸುಮಾರು 15 ಲಕ್ಷ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಸಮುದಾಯ ಹೈಟೆಕ್ ಶೌಚಾಲಯವನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಉದ್ಘಾಟಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಒಳ್ಳೆಯ ಕಾರ್ಯಗಳಿಗೆ ಸಾಕಷ್ಟು ವಿರೋಧಗಳು ಬಂದರು ನಾವು ಎದೆಗುಂದದೆ ಧೈರ್ಯವಾಗಿ ಎದುರಿಸಿ ಸಾರ್ವಜನಿಕರ ಸುಲಭ ಶೌಚಾಲಯವನ್ನು ಉದ್ಘಾಟಿಸುತ್ತಿರುವುದು ಹೆಮ್ಮೆ ತಂದಿದೆ ಎಂದರು.

ಗ್ರಾಮ ಪಂಚಾಯ್ತಿ ಸದಸ್ಯರಾದ ಅಸಿಫ್ ಮತ್ತು ಸುಧೀಂದ್ರ ಪೂಜಾರಿ ಮಾತನಾಡಿ, ದೂರದೂರುಗಳಿಂದ ಬಂದು ಹೋಗುವ ಪ್ರಯಾಣಿಕರು ಮತ್ತು ಪ್ರವಾಸಿಗರಿಗೆ ಶೌಚಾಲಯ ವಿಲ್ಲದೆ ಸಮಸ್ಯೆಯಾಗಿದ್ದು ನಿಜ ಅದರೆ ಈ ಜಾಗದ ಪಕ್ಕದವರು ನ್ಯಾಯಾಲಯದ ಮೆಟ್ಟಿಲು ಹತ್ತಿದ ಕಾರಣ ಹಾಗೂ ಕೆಲವು ಹೋರಾಟಗಾರು ವಿರೋಧಿಸಿದರ ಪರಿಣಾಮ ಸಾಕಷ್ಟು ವಿರೋಧಗಳು ಅಭಿವೃದ್ಧಿಗೆ ಹಿನ್ನಡೆಯಾಗುವಂತಾಯಿತು. ಆದರೂ ಯಾವುದನ್ನು ಲೆಕ್ಕಿದೆ ಗ್ರಾಮಪಂಚಾಯ್ತಿ ಆಡಳಿತ ಮಂಡಳಿ ಅಭಿವೃದ್ದಿಯ ಕಡೆಗೆ ಹೆಚ್ಚು ಒತ್ತು ನೀಡಿ ಸುವ್ಯವಸ್ಥಿತ ಶೌಚಾಲಯವನ್ನು ನಿರ್ಮಿಸಿ ಸಾರ್ವಜನಿಕರ ಲಭಿಸುವಂತೆ ಮಾಡಿರುವುದು ತೃಪ್ತಿ ತಂದಿದೆ ಇದನ್ನು ಸ್ವಚ್ಛವಾಗಿ ಬಳಸಿಕೊಳ್ಳುವುದು ಸಾರ್ವಜನಿಕರದ್ದಾಗಿದೆ ಎಂದರು.

ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಈ.ಮಧುಸೂಧನ್, ಗಣಪತಿ, ಪ್ರಕಾಶಪಾಲೇಕರ್, ಜಿ.ಡಿ.ಮಲ್ಲಿಕಾರ್ಜುನ, ಸುಂದರೇಶ್, ವಿನೋಧ, ದಾನಮ್ಮ, ವನಮಾಲ, ದೀಪಾ ಸುಧೀರ್, ವೇದಾವತಿ, ಧನಲಕ್ಷ್ಮೀ, ಅಶ್ವಿನಿ ರವಿಶಂಕರ್, ಸಾರಾಬಿ, ಆರ್.ವಿ.ನಿರೂಪ್, ನಿರುಪಮ, ಗ್ರಾಮ ಪಂಚಾಯ್ತಿ ಪಿಡಿಓ ಜಿ.ಚಂದ್ರಶೇಖರ್, ಕಾರ್ಯದರ್ಶಿ ಮಧುಶ್ರೀ, ಲೆಕ್ಕಧಿಕಾರಿ ರಾಜೇಶ್, ನಾಗೇಶ್ ಮೋರೆ, ರಾಜೇಶ್ ಇನ್ನಿತರ ಪಂಚಾಯ್ತಿ ಸಿಬ್ಬಂದಿವರ್ಗ ಹಾಜರಿದ್ದರು.

ಶೌಚಾಲಯ ನಿರ್ಮಾಣ ಸಂದರ್ಭದಲ್ಲಿ ಹೋರಾಟಗಾರರ ತೀವ್ರ ವಿರೋಧ ಮತ್ತು ಖಾಸಗಿ ಖಾಲಿ ನಿವೇಶನದಾರರು ನ್ಯಾಯಾಲಯದಿಂದ ಇಂಜೆಕ್ಷನ್ ಆದೇಶ ತಂದು ಅಡ್ಡಿಪಡಿಸಲು ಮುಂದಾದಾಗ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗಾಗಿ ಗ್ರಾಮಾಡಳಿತಕ್ಕೆ ಕೈಜೊಡಿಸಿ ಬೆಂಬಲಿಸಿದವರಾದ ಅಮ್ಮೀರ್‌ಹಂಜಾ ಮತ್ತು ಕುಕ್ಕಳಲೇ ಈಶ್ವರಪ್ಪಗೌಡ, ನಾಗರಾಜ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here