ರಿಪ್ಪನ್‌ಪೇಟೆ: ಐದು ದಿನದ ಸರಳ ಗಣೇಶೋತ್ಸವಕ್ಕೆ ಭರದ ಸಿದ್ಧತೆ

0
757

ರಿಪ್ಪನ್‌ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾದ 54ನೇ ವರ್ಷದ ಗಣೇಶೋತ್ಸವವನ್ನು ಸರ್ಕಾರದ ಮಾರ್ಗಸೂಚಿಯನ್ವಯ ಐದು ದಿನಗಳ ಕಾಲ ಸರಳ ಸಂಪ್ರದಾಯದಂತೆ ಆಚರಿಸಲಾಗುವುದೆಂದು ಸಮಿತಿಯ ನೂತನ ಅಧ್ಯಕ್ಷ ಯೋಗೀಶ್ ಮತ್ತು ಪ್ರಧಾನ ಕಾರ್ಯದರ್ಶಿ ನಾಗರಾಜ್ ಕೆದಲುಗುಡ್ಡ ಪ್ರಕಟಣೆಯಲ್ಲಿ ತಿಳಿಸಿದರು.

ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಆಯೋಜಿಸಲಾದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಳೆದ ವರ್ಷ ಕೊರೊನಾ ಹಿನ್ನೆಲೆಯಿಂದಾಗಿ ಕೇವಲ ಒಂದೇ ದಿನ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗಿ ಅಂದೆ ಸರಳವಾಗಿ ಗಣೇಶಮೂರ್ತಿಯನ್ನು ವಿಸರ್ಜನೆ ಮಾಡಲಾಗಿತು. ಈ ಭಾರಿಯೂ ಸಹ ಕೊರೊನಾ ಮಹಾಮಾರಿ ಮೂರನೇ ಅಲೆ ಬರುವುದೆಂಬ ಸೂಚನೆಯಂತೆ ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದ್ದು ಸರ್ಕರದ ಮಾರ್ಗಸೂಚಿಯನ್ವಯ

ಕರ್ನಾಟಕ ಪ್ರಾಂತೀಯ ಹಿಂದು ಮಹಾಸಭಾ ಸಮಿತಿಯವರು ಐದು ದಿನಗಳ ಕಾಲ ಸರಳ ಸಂಪ್ರದಾಯದಂತೆ ಗಣಪತಿ ಹಬ್ಬದ ಆಚರಣೆ ನಡೆಸುವುದಾಗಿ ನಿರ್ಧರಿಸಲಾಗಿದ್ದು ಅದರನ್ವಯ ಭಕ್ತಾಧಿಗಳು ಧನ ಸಹಾಯ ನೀಡಿ ಗಣೇಶೋತ್ಸವಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ಅಲ್ಲದೆ ಕಡ್ಡಾಯವಾಗಿ ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ನಿತ್ಯ ವೇದಿಕೆ ಬಳಿ ಸ್ಯಾನಿಟೈಸರ್ ಸಿಂಪರಣೆ ಮಾಡುವುದು ಮತ್ತು ಸಿಸಿ ಕ್ಯಾಮರ್ ಅಳವಡಿಸುವುದು, ಹೀಗೆ ಕೋವಿಡ್-19 ನಿಯಮವನ್ನು ಪಾಲನೆ ಮಾಡುವುದರ ಬಗ್ಗೆ ಸಮಿತಿ ಕಟ್ಟುನಿಟ್ಟಿನ ನಿರ್ಧಾರವನ್ನು ಮಾಡುವುದಾಗಿ ತಿಳಿಸಿದರು.

ಸಭೆಯಲ್ಲಿ ಎಂ.ಬಿ.ಮಂಜುನಾಥ, ಎನ್.ಸತೀಶ್, ಎಂ.ಸುರೇಶ್‌ಸಿಂಗ್, ಸುಧೀಂದ್ರ ಪೂಜಾರಿ, ನಿತ್ಯಾನಂದ ಹೆಗಡೆ, ಆರ್.ರಾಘವೇಂದ್ರ, ಆರ್.ಟಿ.ಗೋಪಾಲ, ಅರಣ್‌ ಕಾಳಮುಖಿ, ಮುರುಳಿ ಕೆರೆಹಳ್ಳಿ ವೈ.ಜೆ.ಕೃಷ್ಣ, ಸಂತೋಷ, ಕೆ.ಬಿ.ಹೂವಪ್ಪ, ಆಟೋ ಗುರುರಾಜ, ಹೆಚ್.ಎನ್.ಉಮೇಶ್, ಶ್ರೀಧರ, ಗ್ರಾಪಂ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ವನಮಾಲ, ವಿನೋಧ, ದಾನಮ್ಮ, ಎಸ್.ದಾನಪ್ಪ, ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here