ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾದ ಗಣೇಶಮೂರ್ತಿ ಶ್ರದ್ದಾಭಕ್ತಿಯಿಂದ ಪ್ರತಿಷ್ಟಾಪನೆ

0
595

ರಿಪ್ಪನ್‌ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾದ 54ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ ವಿದ್ಯಾನಗರದಿಂದ ಗಣೇಶಮೂರ್ತಿಯನ್ನು ಮೆರವಣಿಗೆಯ ಮೂಲಕ ವಿನಾಯಕ ವೃತ್ತಕ್ಕೆ ಬರುವುದರೊಂದಿಗೆ ವೃತ್ತದಲ್ಲಿ ವಿನಾಯಕ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್.ಸತೀಶ್ ಭಗವಧ್ವಜಾರೋಹಣವನ್ನು ನೆರವೇರಿಸುವುದರ ಮೂಲಕ ಸ್ವಾಗತಿಸಿ, ತಿಲಕ ಮಂಟಪದಲ್ಲಿ ಗಣೇಶಮೂರ್ತಿಯನ್ನು ಸಂಭ್ರಮ ಸಡಗರದೊಂದಿಗೆ ಶ್ರದ್ದಾಭಕ್ತಿಯಿಂದ ಪ್ರತಿಷ್ಟಾಪನೆ ನರವೇರಿತು.

ವೇ.ವಿ‌. ರವಿಭಟ್ ನೇತೃತ್ವದಲ್ಲಿ ಗಣೇಶಮೂರ್ತಿಗೆ ವಿಶೇಷ ಅಲಂಕಾರ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳೊಂದಿಗೆ ಕುಂಕುಮಾರ್ಚನೆ, ಮಹಾಮಂಗಳಾರತಿ, ನೈವೇದ್ಯ ನಂತರ ಭಕ್ತಸಮೂಹಕ್ಕೆ ಪ್ರಸಾದ ವಿತರಣೆ ನಡೆಯಿತು.

ಕೊರೊನಾ ಮುಕ್ತ ಮತ್ತು ಸಂವೃದ್ಧಿ ಮಳೆ-ಬೆಳೆ ಆರೋಗ್ಯ ಭಾಗ್ಯವನ್ನು ವಿಘ್ನಗಳು ಎದುರಾಗದಂತೆ ದಯಪಾಲಿಸು ವರಸಿದ್ದಿವಿನಾಯಕ ವಿಘ್ನ ನಿವಾರಕನಲ್ಲಿ ರವಿಭಟ್ ಸಾರ್ವಜನಿಕವಾಗಿ ಪ್ರಾರ್ಥನೆ ಮಾಡಿಕೊಂಡು, ಮಹಾಮಂಗಳಾರತಿ ಮಾಡುತ್ತಿದ್ದಂತೆ ಗಣೇಶ ಹೂವಿನ ಪ್ರಸಾದವನ್ನು ನೀಡಿ ಶುಭಹಾರೈಸಿತು.

ಕೊರೊನಾ ಹಿನ್ನಲೆಯಿಂದಾಗಿ ಧ್ವನಿವರ್ಧಕ ಮೂಲಕ ಸಮಿತಿಯವರು ತಿಲಕ್ ಮಹಾಮಂಟಪದಲ್ಲಿ ಸ್ಯಾನಿಟೈಜರ್, ಮಾಸ್ಕ್, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲಾಯಿತು ಪ್ರಚಾರ ಮಾಡುತ್ತಿರುವುದು ವಿಶೇಷವಾಗಿತ್ತು.

ಕರ್ನಾಟಕ ಪ್ರಾಂತೀಯ ಹಿಂದುಮಹಾಸಭಾ ಉತ್ಸವ ಸಮಿತಿಯ ಅಧ್ಯಕ್ಷ ಎಲ್.ವೈ.ಯೋಗೆಶ್, ಪ್ರಧಾನಕಾರ್ಯದರ್ಶಿ ನಾಗರಾಜ್ ಕೆದಲುಗುಡ್ಡೆ, ಪದಾಧಿಕಾರಿಗಳಾದ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಎನ್.ಸತೀಶ್, ಆರ್.ರಾಘವೇಂದ್ರ, ಸುಧೀಂದ್ರ ಪೂಜಾರಿ, ಸುದೀರ್, ಮುರುಳಿಧರ ಕೆರೆಹಳ್ಳಿ, ಲಕ್ಷ್ಮಣ ಬಳ್ಳಾರಿ, ಡಿ.ಈ.ರವಿಭೂಷಣ, ಹೆಚ್.ಎನ್.ಉಮೇಶ್, ಎಸ್.ದಾನಪ್ಪ, ಎಂ.ಡಿ.ಇಂದ್ರಮ್ಮ ಭೀಮರಾಜ್, ಜಯಲಕ್ಷ್ಮೀ ಮೋಹನ್, ನಾಗರತ್ನ ದೇವರಾಜ್, ಸರಸ್ವತಿ ರಾಘವೇಂದ್ರ, ರಾಘವೇಂದ್ರ, ಭಾಸ್ಕರ್, ಈಶ್ವರ, ವೈ.ಜೆ.ಕೃಷ್ಣ, ವೀರಭದ್ರಪ್ಪಗೌಡ ಇನ್ನಿತರ ಹಲವರು ಪಾಲ್ಗೊಂಡಿದ್ದರು.

ಸೊರಬ ವರದಿ:

ಕೊರೊನಾ ಹರಡುವಿಕೆ ತಡೆಗಟ್ಟಲು ಸರ್ಕಾರದ ಕೆಲ ನಿರ್ಭಂದಗಳನ್ನು ಜಾರಿ ಮಾಡಿದ್ದರೂ ಸಹ ತಾಲೂಕಿನ ಚಂದ್ರಗುತ್ತಿ ಹೋಬಳಿಯಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಗ್ರಾಮದ ಗಾಂಧಿ ವೃತ್ತದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ವಿಶೇಷ ಸುಂದರವಾದ ಅಲಂಕೃತವಾದ ಮಂಟಪದಲ್ಲಿ ಸಾರ್ವಜನಿಕ ಮಹಾಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.

ಮಕ್ಕಳು ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರೆ, ಮಹಿಳೆಯರು ಇಷ್ಟಾರ್ಥ ಸಿದ್ಧಿಗಾಗಿ ಗೌರಿ‌ಪೂಜೆ ಸಲ್ಲಿಸಿದರು.

ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಯಾವುದೇ ವಿಶೇಷ ಕಾರ್ಯಕ್ರಮ ಆಯೋಜಿಸಿಲ್ಲದಿದರೂ ಧಾರ್ಮಿಕ ವಿಧಿ ವಿಧಾನಗಳಂತೆ ಗಣೇಶೋತ್ಸವ ಆಚರಿಸಿದರು.

ವರದಿ: ಪುರುಷೋತ್ತಮ್ ಚಂದ್ರಗುತ್ತಿ
ಜಾಹಿರಾತು

LEAVE A REPLY

Please enter your comment!
Please enter your name here