ರಿಪ್ಪನ್‌ಪೇಟೆ ಕಾಲೇಜ್‌ನಲ್ಲಿ ಕನ್ನಡದ ಕಲರವ

0
778

ರಿಪ್ಪನ್‌ಪೇಟೆ: 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುವ ನಿಮಿತ್ತ ರಾಜ್ಯ ಸರ್ಕಾರ ವಿಶೇಷ ಗೀತಗಾಯನ ಕಾರ್ಯಕ್ರಮವನ್ನು ಏಕಕಾಲದಲ್ಲಿ ಅಂದರೆ ಬೆಳಿಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಏರ್ಪಡಿಸಲಾಗಿತ್ತು.

ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತ ಇಲಾಖೆ ಹೊರಡಿಸಲಾದ ಕನ್ನಡ ಉಳಿಸಿ ಬೆಳೆಸುವ ಕನ್ನಡ ನಾಡಗೀತೆಯನ್ನು ವಿದ್ಯಾರ್ಥಿ ಸಮೂಹದಲ್ಲಿ ಪಸರಿಸುವಂತಹ ಕಾರ್ಯದ ಅನ್ವಯ ಇಂದು ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಕನ್ನಡ ನಾಡಗೀತೆಯನ್ನು ವಿದ್ಯಾರ್ಥಿ ಉಪನ್ಯಾಸಕ ಸಮೂಹ ಕನ್ನಡ ನಾಡಗೀತೆಯನ್ನು ಹಾಡಿ ಕನ್ನಡ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.

ವೀಕ್ಷಕರಾಗಿ ನಾಡಕಛೇರಿಯ ಉಪತಹಶೀಲ್ದಾರ್ ಹುಚ್ಚರಾಯಪ್ಪ ಕಾಲೇಜಿನ ಪ್ರಾಚಾರ್ಯ ಮಂಜುನಾಥ್ ಆಲೆಮನೆ ಇನ್ನಿತರು ಉಪನ್ಯಾಸಕ ಸಮೂಹ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here