ರಿಪ್ಪನ್‌ಪೇಟೆ: ಗುಡುಗು ಸಿಡಿಲು ಸಹಿತ ಧರೆಗಿಳಿದ ವರ್ಷಧಾರೆ… ರೈತರಲ್ಲಿ ಮೊಗದಲ್ಲಿ ತಂದ ಹರ್ಷ

0
689

ರಿಪ್ಪನ್‌ಪೇಟೆ: ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಗುಡುಗು ಸಿಡಿಲಿನ ಸಹಿತ ಗಾಳಿ-ಮಳೆ ದತರೆಗಿಳಿದು ರೈತರ ಮೊಗದಲ್ಲಿ ಹರ್ಷವನ್ನು ತಂದಿತು.

ಎರಡು ಮೂರು ದಿನಗಳಿಂದ ಮೋಡಕವಿದ ವಾತವರಣ ಇದ್ದು ಬೇಸಿಗೆ ತಾಪವನ್ನು ತಡೆಯದಂತಾಗಿ ಎಷ್ಟೊತ್ತಿಗೆ ಮಳೆ ಬಂದು ತಂಪಾಗುವುದೋ ಎಂಬ ಮಾತು ಅಲ್ಲಲ್ಲಿ ಕೇಳವಂತಾಗಿತು.

ನಿನ್ನೆ ಧಾರಾಕಾರವಾಗಿ ಆಲಿಕಲ್ಲು ಸಹಿತ ಮಳೆ ಸುರಿದು ರೈತ ನಾಗರೀಕರಲ್ಲಿ ಸಂತಸ ತಂದಿದ್ದು ಅಡಿಕೆ ತೋಟ ಮತ್ತು ಬಾಳೆ ಇನ್ನಿತರ ಬೆಳೆಗಳಿಗೆ ನೀರು ಹಾಯಿಸುತ್ತಿದ್ದ ರೈತರು ನಿಟ್ಟುಸಿರು ಬಿಡುವಂತಾದರೆ ಶುಂಠಿ ಒಣಗಿಸುವ ಕಣದವರು ಮಾತ್ರ ಮಳೆಗೆ ಕಂಗಾಲಾಗುವಂತಾಗಿ ಇತ್ತ ಬೆಲೆ ಇಲ್ಲದೆ ಆತಂಕದಲ್ಲಿದ್ದರೆ ಅತ್ತ ಮಳೆ ಬಂದು ಒಣಗಿಸಲಾದ ಶುಂಠಿ ಹಾಳಾಯಿಗಿ ಹೋಯಿತು ಎಂಬ ಚಿಂತೆ ಕಾಡುವಂತಾಗಿದೆ.

ಒಟ್ಟಾರೆಯಾಗಿ ಯುಗಾದಿ ನಂತರದಲ್ಲಿ ಅಶ್ವಿನಿ ಮಳೆ ಸುರಿದು ರೈತಾಪಿ ವರ್ಗ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಿರಿವುದು ಹರ್ಷ ತಂದಿದೆ.

ರಿಪ್ಪನ್‌ಪೇಟೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಹ ಮಳೆಯಾಗಿರುವುದು ಎಲ್ಲರ ಮೊಗದಲ್ಲಿ ಸಂತಸ ಮೂಡಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here