ರಿಪ್ಪನ್ಪೇಟೆ; ಇಲ್ಲಿನ ಗವಟೂರು ಗ್ರಾಮದ ನಿವಾಸಿ ಕೃಷಿಕ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ, ಬಿಜೆಪಿ ಮುಖಂಡ, ಅಖಿಲಭಾರತ ವೀರಶೈವ ಸಮಾಜದ ತಾಲ್ಲೂಕು ಮಾಜಿ ನಿರ್ದೇಶಕ ಜಿ.ಟಿ.ಯೋಗೀಶ್ವರಗೌಡ (56) ಅನಾರೋಗ್ಯದಿಂದ ಶಿವಮೊಗ್ಗ ಮೆಟ್ರೋ ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತರು ಪತ್ನಿ ಓರ್ವ ಪುತ್ರ-ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯುವ ಗವಟೂರು ಗ್ರಾಮದ ಅವರ ಜಮೀನಿನಲ್ಲಿ ಜರುಗಿತು.
ಸಂತಾಪ:
ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಜಿ.ಟಿ.ಯೋಗೇಶ್ವರಗೌಡರ ಅಕಾಲಿಕ ನಿಧನದಿಂದ ಪಕ್ಷಕ್ಕೆ ಮತ್ತು ವೀರಶ್ಯವ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಜೆಡಿಎಸ್ ಮುಖಂಡ ಅರ್.ಎ.ಚಾಬುಸಾಬ್, ಜಿ.ಎಸ್.ವರದರಾಜ್, ಪಿ.ರಮೇಶ್ ಎಂ.ಬಿ.ಲಕ್ಷ್ಮಣ ಗೌಡ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಎನ್.ಮಂಜಪ್ಪ ಇನ್ನಿತರರು ತೀವ್ರ ಸಂತಾಪ ವ್ಯಕ್ತಪಡಿಸಿ ಮೃತರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.
Related