ರಿಪ್ಪನ್‌ಪೇಟೆ: ಠಾಣೆಯ ಸಿಬ್ಬಂದಿಗೆ ಹಲ್ಲೆ ಎಸಗಿ ಕಾಂಪೌಂಡ್ ಹಾರಿ ಎಸ್ಕೇಪ್ ಆದ ಆರೋಪಿ !!!

0
2106

ರಿಪ್ಪನ್‌ಪೇಟೆ: ಸ್ಥಳೀಯ ಠಾಣಾ ವ್ಯಾಪ್ತಿಯಲ್ಲಿ ಶನಿವಾರದಂದು ರಾತ್ರಿ ಸಾಗರ ರಸ್ತೆಯಲ್ಲಿನ ಉದ್ಯಮಿ ವೆಂಕಪ್ಪಶೆಟ್ಟರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನ ಮಾಡಿರುವ ಬಗ್ಗೆ ಸಂಶಯಾಸ್ಪದ ಮೇಲೆ ವಡಗೆರೆಯ ನಿವಾಸಿಯನ್ನು ಪತ್ತೆ ಮಾಡಿ ಠಾಣೆಗೆ ಒಪ್ಪಿಸಲಾಗಿದ್ದರೂ ಕೂಡಾ ಮಂಗಳವಾರ ಬೆಳಗ್ಗೆ ವಿಚಾರಣೆಗೂ ಮುನ್ನವೇ ಠಾಣೆಯ ಸಿಬ್ಬಂದಿ ಮೇಲೆ ಹಲ್ಲೆ ಎಸಗಿ ಕಾಂಪೌಂಡ್ ಹಾರಿ ಪರಾರಿಯಾದ ಘಟನೆ ನಡೆದಿದೆ.

ಟ್ರ್ಯಾಕ್ಟರ್ ಕಳ್ಳತನದ ವ್ಯಕ್ತಿಯನ್ನು ಸೋಮವಾರ ಮಧ್ಯಾಹ್ನ ಸಂಶಯಾಸ್ಪದ ಮೇಲೆ ವಿಚಾರಣೆಗಾಗಿ ಠಾಣೆಗೆ ಕರೆತರಲಾಗಿದ್ದು ರಾತ್ರಿಯೆಲ್ಲ ಠಾಣೆಯಲ್ಲಿಟ್ಟುಕೊಳ್ಳಲಾಗಿ ಇಂದು ಬೆಳಗ್ಗೆ ಶೌಚಾಲಯಕ್ಕೆ ಹೋದವನು ಹೊರಬರುತ್ತಿದ್ದಂತೆ ಅಲ್ಲೆ ಇದ್ದ ಸಿಬ್ಬಂದಿಯ ಮೇಲೆ ಹಲ್ಲೆ ಎಸಗಿ ಕಾಂಪೌಂಡ್ ಗೋಡೆ ಹಾರಿ ಪರಾರಿಯಾಗಿದ್ದಾನೆಂದು ಹೇಳಲಾಗಿದೆ.

ಪರಾರಿಯಾದ ಆರೋಪಿಯು ಮರಳು ದಂಧೆಯಲ್ಲಿ ಶಾಮೀಲಾಗಿರುವ ಇವನು ಈ ರೀತಿಯಲ್ಲಿ ಠಾಣೆಯಿಂದ ಪರಾರಿಯಾಗಿರುವ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಒಟ್ಟಾರೆಯಾಗಿ ರಕ್ಷಣಾ ಇಲಾಖೆಯವರ ಮೇಲೆ ಸಾರ್ವಜನಿಕರಲ್ಲಿ ನಂಬಿಕೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಅವ್ಯಾಹಿತವಾಗಿ ನಡೆಯುತ್ತಿದ್ದು ಇತ್ತೀಚೆಗೆ ಕಳ್ಳತನಗಳು ನಡೆದರೂ ಇಲಾಖೆಯ ಗಮನಕ್ಕೆ ಬಂದಂತೆ ಕಾಣುತ್ತಿಲ್ಲ.

ಇನ್ನಾದರೂ ಠಾಣಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕರಲ್ಲಿ ಅಪನಂಬಿಕೆಯನ್ನು ದೂರ ಮಾಡುವರೆ ಕಾದುನೋಡಬೇಕಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here