ರಿಪ್ಪನ್‌ಪೇಟೆ ಪ್ರಥಮದರ್ಜೆ ಕಾಲೇಜ್‌ನಲ್ಲಿ ನಡೆದ ಕುತೂಹಲಕಾರಿ ಘಟನೆ ; ಹಿಜಾಬ್‌ಗೆ ಅವಕಾಶ ನೀಡುವಂತೆ ಪೋಷಕರ ಒತ್ತಡ ! ಸಿಡಿಸಿ ಮಧ್ಯ ಪ್ರವೇಶದಿಂದ ತಿಳಿಯಾದ ವಾತಾವರಣ !!

0
1319

ರಿಪ್ಪನ್‌ಪೇಟೆ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ವಿದ್ಯಾರ್ಥಿ ಪೋಷಕರು ಶನಿವಾರ ದಿಢೀರ್ ಕಾಲೇಜ್‌ಗೆ ಭೇಟಿ ನೀಡಿ ನಮ್ಮ ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ಕಲ್ಪಿಸಬೇಕು ಎಲ್ಲಿಯೂ ಇಲ್ಲದ ಕಾನೂನು ಇಲ್ಲಗೇಕೆ ಎಂದು ಪ್ರಾಚಾರ್ಯರನ್ನು ಪ್ರಶ್ನಿಸುವ ಮೂಲಕ ಹಿಜಾಬ್‌ಗೆ ಅವಕಾಶ ನೀಡಬೇಕು ಎಂದು ಒತ್ತಡ ಹಾಕಿದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.

ಶಿವಮೊಗ್ಗ ಜಿಲ್ಲಾ ಕೇಂದ್ರ ಮತ್ತು ಇತರ ಜಿಲ್ಲೆಗಳಲ್ಲಿಲ್ಲದಿರುವುದು ರಿಪ್ಪನ್‌ಪೇಟೆ ಪ್ರಥಮ ದರ್ಜೆ ಕಾಲೇಜ್‌ಗೇಕೆ ? ಎಂದು ವಿದ್ಯಾರ್ಥಿ ಪೋಷಕರು ಪ್ರಾಚಾರ್ಯರನ್ನು ಕೇಳಿದರು ಆಗ ಪ್ರಾಚಾರ್ಯರು ತಾಳ್ಮೆಯಿಂದಲೇ ಉತ್ತರಿಸಲು ಮುಂದಾದಾಗ ಕೆಲವರು ಲಿಖಿತವಾಗಿ ಕೊಡಿ ನ್ಯಾಯಾಲಯ ಏನು ತೀರ್ಪು ನೀಡಿದೆ ? ಎಂದು ಒಂದರ ಮೇಲೊಂದು ಪ್ರಶ್ನೆಗಳ ಸುರಿಮಳೆಯನ್ನು ಸುರಿಸಿದರು ಅಗ ಪ್ರಾಚಾರ್ಯರು ಸಿಡಿಸಿ ಸಮಿತಿಯವರ ಗಮನ ಸೆಳೆದಾಗ ತಕ್ಷಣ ಕಾಲೇಜ್‌ಗೆ ಭೇಟಿ ನೀಡಿದ ಸಿಡಿಸಿ ಸದಸ್ಯರಾದ ಎಂ.ಬಿ.ಮಂಜುನಾಥ, ಆರ್.ಟಿ.ಗೋಪಾಲ್ ಮತ್ತು ಕೀರ್ತಿಗೌಡ ಪೋಷಕರ ಅಹವಾಲು ಅಲಿಸಿ ನ್ಯಾಯಾಲಯದ ಅದೇಶವನ್ನು ಗೌರವಿಸುತ್ತೇವೆ ಎಂದು ತಿಳಿಸಿದಾಗ ಪೋಷಕರು ನಾವು ವಿದ್ಯಾವಂತರು ನಮಗೂ ಕಾನೂನು ಗೊತ್ತಿದೆ ಅವಕಾಶ ನೀಡಲೇಬೇಕು ಎಂದು ಹಠ ಮಾಡಿದಾಗ ಕೆಲ ಸಮಯ ಪೋಷಕರಲ್ಲಿ ಮತ್ತು ಸಿಡಿಸಿಯವರಲ್ಲಿ ವಾದವಿವಾದ ನಡೆದು ಕೊನೆಗೆ ಸಿಡಿಸಿಯವರು ನ್ಯಾಯಾಲಯದ ಅದೇಶದಂತೆ ನಾವು ಯಾವುದೇ ಕಾರಣಕ್ಕೂ ಹಿಜಾಬ್ ಹಾಕಿ ಬರುವವರನ್ನು ಕಾಲೇಜ್‌ಗೆ ಬರದಂತೆ ತಡೆಯುವುದಾಗಿ ತಿಳಿಹೇಳಿ ಕಳುಹಿಸಿದರು ಎನ್ನಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯ ಎಎಸ್‌ಐ ಮತ್ತು ಸಿಬ್ಬಂದಿವರ್ಗ ಹಾಗೂ ಹೊಸನಗರ ವೃತ್ತ ನಿರೀಕ್ಷಕ ಮಧುಸೂದನ್ ಕಾಲೇಜ್‌ಗೆ ಭೇಟಿ ನೀಡಿ ಪೋಷಕರ ಬಳಿ ಚರ್ಚಿಸಿ ಮನವೊಲಿಸುವ ಪ್ರಯತ್ನ ನಡೆಸಿ ನ್ಯಾಯಾಲಯದ ಅದೇಶವನ್ನು ಕಡ್ಡಾಯವಾಗಿ ಪಾಲಿಸುವುದು ನಿಯಮವಾಗಿದೆ ಹೀಗೆ ಬಂದು ಅಸಭ್ಯವಾಗಿ ನಡೆದುಕೊಂಡರೆ ಕಾನೂನು ಕ್ರಮ ಕೈಗೊಳ್ಳಬೇಕಾಗುವುದೆಂದು ಎಚ್ಚರಿಸಿ ಪೋಷಕರನ್ನು ಹೊರಕಳುಹಿಸಿದರು ಎನ್ನಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here