ರಿಪ್ಪನ್‌ಪೇಟೆ ಬಳಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಟಿಪ್ಪರ್ ಚಾಲಕ ಸಾವು !

0
6475

ರಿಪ್ಪನ್‌ಪೇಟೆ: ಅರಸಾಳು ಸಮೀಪ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಮೃತನನ್ನು ಹೊಸನಗರದ ಪಟಗುಪ್ಪ ರಸ್ತೆಯ ಮುಸ್ಲಿಂ ಕೇರಿಯ ಫೈಜಲ್ (33) ಎಂದು ಗುರುತಿಸಲಾಗಿದೆ. ಈತ ಕಳೆದ ಮಾರ್ಚ್ ತಿಂಗಳಲ್ಲಿ ವಿವಾಹವಾಗಿದ್ದನು ಎಂದು ತಿಳಿದುಬಂದಿದೆ.

ಇಂದು ಬೆಳಗಿನಜಾವ 9ನೇ ಮೈಲಿಕಲ್ಲು ಬಳಿ ಮರಳು ತುಂಬಿದ ಟಿಪ್ಪರ್ ಲಾರಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು.

ಲಾರಿ ಯಾರಿಗೆ ಸೇರಿದ್ದು ಎಂದು ಈವರೆಗೆ ತಿಳಿದುಬಂದಿಲ್ಲ. ಲಾರಿಗೆ ಫಿಟ್ನೆಸ್ ಮತ್ತು ಇನ್ಶುರೆನ್ಸ್ ಅವಧಿ ಸಹ ಮುಗಿದಿತ್ತು ಎಂದು ತಿಳಿದುಬಂದಿದೆ. ಈ ಬಗ್ಗೆ ಯಾವ ರೀತಿ ಪ್ರಕರಣ ದಾಖಲಾಗುತ್ತದೆ ಎಂದು ಕಾದು ನೋಡಬೇಕಿದೆ.

ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಶಾಸಕ ಹರತಾಳು ಹಾಲಪ್ಪ ಸ್ವಕ್ಷೇತ್ರದಲ್ಲಿ ಅವ್ಯಾಹತವಾಗಿ ಅಕ್ರಮ ಮರುಳು ದಂಧೆ ನಡೆಯುತ್ತಿದ್ದು ಹೇಳುವವರು ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಘಟನೆಗಳು ಸಂಭವಿಸಿದಾಗ ಮಾತ್ರ ಎಚ್ಚರಗೊಳ್ಳುವ ಸರ್ಕಾರದ ಅಧಿಕಾರಿಗಳು ಉಳಿದ ಸಮಯದಲ್ಲಿ ತಮ್ಮ ಕಿಸೆ ಭರ್ತಿ ಮಾಡಿಕೊಂಡು ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಣ್ಮುಚ್ಚಿ ಕುಳಿತಿರುತ್ತಾರೆಂದು ಸ್ಥಳದಲ್ಲಿದ್ದ ರೈತ ನಾಗರೀಕರುಗಳಾದ ಸೋಮಶೇಖರ್, ಮುರುಗೇಂದ್ರಪ್ಪ, ಅದೀಶ್ವರ, ರೂಪಧರ, ಶಾಲಾ ವಿದ್ಯಾರ್ಥಿನಿ ಶಾಲಿನಿ, ಪದ್ಮಶ್ರೀ, ಪ್ರೇಮ, ನಾಗವೇಣಿ ಇನ್ನಿತರ ಹಲವರು ತಮ್ಮ ಅಸಹಾಯಕತೆಯನ್ನು ಮಾಧ್ಯಮದವರ ಬಳಿ ತೊಡಿಕೊಂಡರು.

ಇನ್ನಾದರೂ ಪೊಲೀಸ್, ಅರಣ್ಯ, ಗಣಿ ಭೂವಿಜ್ಞಾನ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದೆ ಕಾದುನೋಡಬೇಕಾಗಿದೆ.

ಈ ಅಪಘಾತ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here