ರಿಪ್ಪನ್‌ಪೇಟೆ: ಬಾವಿಗೆ ಬಿದ್ದು ಯುವಕ ಮೃತ್ಯು ! ಹೇಗಾಯ್ತು ಘಟನೆ?

0
4859

ರಿಪ್ಪನ್‌ಪೇಟೆ: ಇಲ್ಲಿನ ವಿನಾಯಕ ನಗರದ ನಿವಾಸಿ ಯುವಕನೊಬ್ಬ ಆಕಸ್ಮಿಕವಾಗಿ ಕಾಲುಜಾರಿ ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಡರಾತ್ರಿ 10.30ರ ಸುಮಾರಿಗೆ ನಡೆದಿದೆ.

ಆಂಜನೇಯ ಡಿ.ಈ. ಅಲಿಯಾಸ್ ಅಂಜು ಬಿನ್ ಈರಪ್ಪ (25) ಮೃತ ದುರ್ದೈವಿಯಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದ ಈತನ ಕುಟುಂಬ ಮನೆಯ ಕಾಂಪೌಂಡಿನ ಒಳಗಡೆ ಇದ್ದ ತೆರೆದ ಬಾವಿಯಲ್ಲಿ ಕಾಲು ಜಾರಿ ಬಿದ್ದಿದ್ದಾನೆ, ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪಾಳುಬಿದ್ದ ತೆರೆದ ಬಾವಿ ಮುಚ್ಚದೆ ಇದ್ದು ಮನೆಯ ಮಾಲಿಕನ ನಿರ್ಲಕ್ಷ್ಯದಿಂದಾಗಿ ಈತ ಮೃತಪಟ್ಟಿದ್ದಾನೆಂದು ಸ್ಥಳೀಯರು ದೂರಿದ್ದಾರೆ‌‌.

ಇಂದು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here