ರಿಪ್ಪನ್‌ಪೇಟೆ: ಭಾರತ್‌ ಬಂದ್‌ಗೆ ಪಕ್ಷತೀತ ಬೆಂಬಲ

0
498

ರಿಪ್ಪನ್‌ಪೇಟೆ: ಸೆ. 27ರ ಸೋಮವಾರ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್‌ ಬಂದ್‌ಗೆ ಹೊಸನಗರ ತಾಲ್ಲೂಕು ರೈತ ಸಂಘ ಜೆಡಿಎಸ್‌ ಘಟಕ ಸೇರಿದಂತೆ ಇತರ ಸಂಘ ಸಂಸ್ಥೆಯವರು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆಂದು ಜೆಡಿಎಸ್ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಮತ್ತು ಜಿಲ್ಲಾ ರೈತ ಮುಖಂಡ ಆರ್.ಎನ್.ಮಂಜಪ್ಪ ಮತ್ತು ಕಲ್ಮಕ್ಕಿ ಸುಗಂಧರಾಜ್ ಜಂಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪತ್ರಿಕಾಗೋಷ್ಟಿ ನಡೆಸುವ ಮೂಲಕ ಕೇಂದ್ರ ಸರ್ಕಾರ ರೈತ ವಿರೋಧಿ ಶಾಸನವನ್ನು ಅನುಷ್ಟಾನಗೊಳಿಸಿರುವ ಬಗ್ಗೆ ಭಾರತ್ ಬಂದ್ ಕಾರ್ಯಕ್ರಮ ಏರ್ಪಡಿಸಿದ್ದು ಈ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಬೆಂಬಲ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ.

ಈಗಾಗಲೇ ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ರೈತ ವಿರೋಧಿ ಕೃಷಿ ವಿರೋಧಿ ಶಾಸನದ ಬಗ್ಗೆ ಮತ್ತು ಎಪಿಎಂಸಿ ತಿದ್ದುಪಡಿ ಕುರಿತು ಹಾಗೂ ವಿದ್ಯುತ್ ಖಾಸಗೀಕರಣ, ಪಂಪ್ ಸೆಟ್ ಮೇಲೆ ಮೀಟರ್ ಅಳವಡಿಸಲು ತಳೆದಿರುವ ನಿಲುವುಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಇಂತಹ ಜನ ವಿರೋಧಿ ರೈತ ವಿರೋಧಿ ಸರ್ಕಾರವನ್ನು ತಕ್ಷಣ ವಜಾಗೊಳಿಸುವಂತೆ ಒತ್ತಾಯಿಸಿ ಇದೇ ಸೋಮವಾರ ಭಾರತ್ ಬಂದ್ ಕರೆ ನೀಡಲಾಗಿದ್ದು ಇದಕ್ಕೆ ರಿಪ್ಪನ್‌ಪೇಟೆಯ ಸಮಸ್ತ ರೈತ ನಾಗರೀಕರು ಬೆಂಬಲ ನೀಡುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ,ಜೆಡಿಎಸ್ ರೈತಮುಖಂಡ ಮುಡುಬ ಧರ್ಮಪ್ಪ, ಕಾಂಗ್ರೆಸ್ ಮುಖಂಡ ಚಂದಾಳದಿಂಬ ಡಾಕಪ್ಪ, ಕುಕ್ಕಳಲೇ ಈಶ್ವರಪ್ಪ ಜನಜಾಗೃತಿ ಹೋರಾಟ ಸಮಿತಿ ಅಧ್ಯಕ್ಷ ಟಿ.ಆರ್.ಕೃಷ್ಣಪ್ಪ ಮಾತನಾಡಿ, ದಿನನಿತ್ಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿವೆ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್‌ಗಳ ದರ ಏರಿಕೆಯಿಂದಾಗಿ ಶ್ರೀಸಾಮಾನ್ಯರು ಬದುಕು ದುಸ್ಥರವಾಗಿದೆ. ಅಲ್ಲದೆ ರಾಜ್ಯ ಸರ್ಕಾರ ಸಹ ಜನಪರ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಸೋಮವಾರ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ‌. ಈ ಪ್ರತಿಭಟನಾ ಕಾರ್ಯದಲ್ಲಿ ಭಾಗವಹಿಸಿ ಬೆಂಬಲಿಸುವಂತೆ ರೈತ ನಾಗರೀಕರಲ್ಲಿ ಮನವಿ ಮಾಡಿದರು.

ಸೋಮವಾರ ಸಂತೆಯಂದು ಪ್ರತಿಭಟನೆ ಬೇಡ:

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣ ವ್ಯಾಪಾರ ವಹಿವಾಟು ಇಲ್ಲದ ಪರಿಸ್ಥಿತಿಯಲ್ಲಿರುವ ಪಟ್ಟಣದ ವರ್ತಕರುಗಳು ವಾರದ ಸಂತೆ ಸೋಮವಾರ ನಡೆಯುತ್ತಿದ್ದು ಅಂದು ಪ್ರತಿಭಟನೆ ಬೇಡ ಮಂಗಳವಾರ ಇಲ್ಲವೆ ಬುಧವಾರ ನಡೆಸುವಂತೆ ಜನಜಾಗೃತಿ ಹೋರಾಟ ಸಮಿತಿ ಅಧ್ಯಕ್ಷ ಟಿ.ಆರ್.ಕೃಷ್ಣಪ್ಪ ಪತ್ರಿಕಾಗೋಷ್ಟಿಯಲ್ಲಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದಾಗ ಉಳಿದವರು ಕೆಲಕಾಲ ಗಲಿಬಿಲಿಗೊಂಡರು. ನಂತರ ನೀವು ಬಾರದಿದ್ದರೂ ತೊಂದರೆ ಇಲ್ಲ ದೇಶವ್ಯಾಪ್ತಿ ಸೋಮವಾರ ಪ್ರತಿಭಟನೆಗೆ ಕರೆ ನೀಡಿದ್ದಾರೆ ನಾವುಗಳು ಬದಲಾಯಿಸುವುದಿಲ್ಲ ನಡೆಸುತ್ತೇವೆ ಎಂದು ಹೇಳಿದರು.

ಜಾಹಿರಾತು

LEAVE A REPLY

Please enter your comment!
Please enter your name here