ರಿಪ್ಪನ್‌ಪೇಟೆ ಯುವಕನ ಅಪ್ರತಿಮ ಸಾಧನೆ

0
939

ರಿಪ್ಪನ್‌ಪೇಟೆ: ಭಾನುವಾರ ಚಿಕ್ಕಮಗಳೂರಿನಲ್ಲಿ ಅಬ್ಲೇಜ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಲಾದ ಡರ್ಟಿ ಪ್ರಿಕ್ಸ್ಅಟೋಕ್ರಾಸ್ ರ‍್ಯಾಲಿಯಲ್ಲಿ ರಿಪ್ಪನ್‌ಪೇಟೆಯ ಯುವಕ ನಿತೀನ್ ಎಂ.ಗೌಡ ಅದ್ವಿತೀಯ ಪ್ರದರ್ಶನ ತೋರಿ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ರಿಪ್ಪನ್‌ಪೇಟೆ ಕೀರ್ತಿಯನ್ನು ಹೆಚ್ಚಿಸಿದ್ದಾನೆಂದು ಅಭಿಮಾನಿ ಬಳಗ ಅಭಿನಂದಿಸಿದೆ.

ನಿತೀನ್ ಎಂ.ಗೌಡ ರಿಪ್ಪನ್‌ಪೇಟೆ ಹೊಸನಗರ ರಸ್ತೆಯ ನಿವಾಸಿಯಾಗಿದ್ದು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ ಮತ್ತು ಮತ್ತು ತಾಯಿ ಪ್ರವೀಣ್ ದಂಪತಿಯವರ ಪುತ್ರರಾಗಿರುವ ಇವರು ಕಾಫಿನಾಡಿನ ಜನಮೂಗಿನ ಮೇಲೆ ಬೆರಳಿಡುವಂತೆ ತನ್ನ ಚಾಲನಾ ಪ್ರದರ್ಶನ ನೀಡಿ ಎಲ್ಲರ ಮನಗೆದ್ದಿದ್ದಾನೆ.

ಬಾಲ್ಯದಿಂದಲೂ ದ್ವಿಚಕ್ರ ವಾಹನಗಳನ್ನು ಓಡಿಸುತ್ತುವಲ್ಲಿ ಆಸಕ್ತಿ ಹೊಂದಿದ್ದರು ನಂತರ ಕಾರ್‌ರೇಸ್‌ಗಳನ್ನು ವೀಕ್ಷಿಸುತ್ತಿದ್ದ ಅವರು ಈ ಕ್ಷೇತ್ರದಲ್ಲಿ ಏನಾದರೂ ಸಾಧಿಸುವ ಹಂಬಲದಿಂದ ಕಾರ್‌ಗಳನ್ನು ಚಲಾಯಿಸುತ್ತಾ ಆಸಕ್ತಿ ಹೊಂದಿದರು. ಯಾವುದೇ ತರಬೇತಿದಾರರಿಲ್ಲದೆ ನಿರಂತ ಶ್ರಮ ಹಾಗೂ ಅಭ್ಯಾಸದಿಂದ ಸ್ವತಃ ಕಾರ್‌ರೇಸ್‌ಗಳಲ್ಲಿ ಭಾಗವಹಿಸುವ ಪ್ರಾವಿಣ್ಯತೆ ಬೆಳಸಿಕೊಂಡ ಕಳೆದ ಕೆಲ ವರ್ಷಗಳಿಂದ ಕಾರ್ ರೇಸ್‌ನಲ್ಲಿ ತೊಡಗಿಸಿಕೊಳ್ಳುವ ಮೂಲಕ ಇಂದು ಮಲೆನಾಡಿನಲ್ಲೇ ಮೊಟ್ಟಮೊದಲ ಕಾರ್‌ರೇಸ್ ಗಳಲ್ಲಿ ಭಾಗವಹಿಸುತ್ತಿರುವ ಸ್ಪರ್ಧಿಯಾಗಿ ಹೊರಹೊಮ್ಮಿರುವ ಪ್ರತಿಭೆಯಾಗಿ ಮಿಂಚಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ಅನೇಕ ಸಾಧಕರ ಜೊತೆ ಸೆಣಸಾಡಿ ಸಾಧನೆ ಮಾಡಿದ ಯುವಕನಿಗೆ ರಿಪ್ಪನ್‌ಪೇಟೆಯ ಅನೇಕ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here