ರಿಪ್ಪನ್‌ಪೇಟೆ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪಾದಚಾರಿ ಸಾವು !

0
2942

ರಿಪ್ಪನ್‌ಪೇಟೆ: ಇಲ್ಲಿನ ಹೊಸನಗರ ರಸ್ತೆಯಲ್ಲಿ ಪಾದಚಾರಿಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರಗೊಂಡಿದ್ದರು. ಇವರನ್ನು ಶಿವಮೊಗ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತರನ್ನು ಇಲ್ಲಿನ ಮಸೀದಿ ಕಾಲೋನಿಯ ಅಬ್ದುಲ್ ರೆಹಮಾನ್‌ಸಾಬ್ (ಅದ್ರಮಾನ್) (65) ಎಂದು ಗುರುತಿಸಲಾಗಿದೆ.

ಸುಮನ ಸ್ಟೂಡಿಯೋದ ಹತ್ತಿರದ ಕೊರಗಪ್ಪ ದಿನಸಿ ಅಂಗಡಿಯ ಮುಂಭಾಗ ನಡೆದುಕೊಂಡು ಹೋಗುವಾಗ ಹೊಸನಗರ ಕಡೆಯಿಂದ ರಿಪ್ಪನ್‌ಪೇಟೆ ಕಡೆ ಬರುತ್ತಿದ್ದ KA 27 Y 0187 ನೊಂದಣಿ ಸಂಖ್ಯೆಯ ಬೈಕ್ ಸವಾರನು ಅಜಾಗರೂಕತೆ ಮತ್ತು ಅತಿವೇಗದಲ್ಲಿ ಬಂದು ಡಿಕ್ಕಿ ಹೊಡೆದಿದ್ದನು ಎಂದು ತಿಳಿದುಬಂದಿದೆ.

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ ಇದ್ದಾರೆ.

ಈ ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here