ರಿಪ್ಪನ್‌ಪೇಟೆ ; ವರಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಠಾ ವರ್ಧಂತ್ಯುತ್ಸವ ಧಾರ್ಮಿಕ ಕಾರ್ಯಕ್ರಮ ಸುಸಂಪನ್ನ

0
453

ರಿಪ್ಪನ್‌ಪೇಟೆ: ಇಲ್ಲಿನ ಇತಿಹಾಸ ಪ್ರಸಿದ್ಧ ವರಸಿದ್ದಿವಿನಾಯಕ ಮತ್ತು ಜಗನ್ಮಾತೆ ಶ್ರೀಅನ್ನಪೂರ್ಣೆಶ್ವರ ಅಮ್ಮನವರ ದೇವಸ್ಥಾನದ ಐದನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸುಸಂಪನ್ನಗೊಂಡಿತು.

ಶಿವಮೊಗ್ಗದ ವೇದಬ್ರಹ್ಮಶ್ರೀ ವಸಂತಭಟ್ ಮತ್ತು ಅಗಮಿಕರ ಸಹಯೋಗದಲ್ಲಿ ವಿನಾಯಕ ಸ್ವಾಮಿ ದೇವಸ್ಥಾನದ ಅರ್ಚಕರಾದ ಗುರುರಾಜ್ ಭಟ್ ಅರಸಾಳು ಮತ್ತು ಚಂದ್ರಶೇಖರ್ ಭಟ್ ಬೆನವಳ್ಳಿ ಇವರುಗಳೊಂದಿಗೆ ಇಂದು ಬೆಳಗ್ಗೆ ವರಸಿದ್ದಿವಿನಾಯಕ ಮತ್ತು ಜಗನ್ಮಾತೆ ಶ್ರೀಅನ್ನಪೂರ್ಣೆಶ್ವರ ಅಮ್ಮನವರ ಸನ್ನಿಧಾನದಲ್ಲಿ ಕಲಾವೃದ್ಧಿ ಹೋಮ-ಕನಕಾಭಿಷೇಕ, ಕುಂಭಾಭಿಷೇಕ, ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.

ಈ ಧಾರ್ಮಿಕ ಪೂಜಾ ಕಾರ್ಯದಲ್ಲಿ ಕ್ಷೇತ್ರದ ಮಾಜಿ ಸಚಿವ ಮತ್ತು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಭಾಗವಹಿಸಿ ದೇವರ ದರ್ಶನಾಶೀರ್ವಾದವನ್ನು ಪಡೆದು ಧರ್ಮದ ಆಚರಣೆಯಿಂದ ಶಾಂತಿ ನೆಮ್ಮದಿಯನ್ನು ಕಾಣಲು ಸಾಧ್ಯ ಕಳೆದ ಎರಡು ಮೂರು ವರ್ಷಗಳಿಂದ ಕೊರೊನಾ ರೋಗದಿಂದಾಗಿ ಧಾರ್ಮಿ ಆಚರಣೆಗಳು ಇಲ್ಲದೆ ಭಕ್ತರಲ್ಲಿ ಭಕ್ತಿಯ ಭಾವನೆ ಕುಂಠಿತವಾಗಿತು ಈಗ ಆಚರಣೆಗಳು ಹೆಚ್ಚಾಗಿ ಅಚರಿಸುವುದರಿಂದ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಜಗತ್ತಿನಲ್ಲಿ ಆಚರಿಸಿರುವ ಕೊರೊನಾ ರೋಗವನ್ನು ದೂರಗೊಳಿಸಿ ಜನರಲ್ಲಿನ ಭಯವನ್ನು ಹೋಗಲಾಡಿಸುವಂತೆ ಭಗವಂತನಲ್ಲಿ ಪ್ರಾರ್ಥಿಸಿದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಎನ್.ಕಾಮತ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎನ್.ಸತೀಶ್, ಎಂ.ಸುರೇಶ್‌ಸಿಂಗ್, ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಮುಖಂಡರಾದ ಆರ್.ಟಿ.ಗೋಪಾಲ್, ಬೆಂಗಳೂರು ಉದ್ಯಮಿ ಎಲ್.ನಾಗರಾಜ್‌ಶೆಟ್ಟಿ, ಎಂ.ಬಿ.ಮಂಜುನಾಥ, ಸುಧೀಂದ್ರ ಪೂಜಾರಿ, ಎಂ.ಡಿ. ಇಂದ್ರಮ್ಮ, ನಾಗರತ್ನ ದೇವರಾಜ್, ಆಶಾ ಸತೀಶ್, ಜಯಲಕ್ಷ್ಮಿ, ಸರಸ್ವತಿ, ಆರ್.ರಾಘವೇಂದ್ರ, ಪದ್ಮಾ ಸುರೇಶ್, ಈಶ್ವರಶೆಟ್ಟೆ, ಸುಧೀರ್, ದೀಪಾ, ಧನಲಕ್ಷ್ಮಿ, ವೇದಾವತಿ, ಸೀತಾ, ಗೀತಾ, ಶುಭ ಶಶಿಧರ ಪೈ,‌ ಬಾಲಚಂದ್ರರಾವ್, ಹೆಚ್.ಪಿ.ಸುರೇಶ್,‌ ಪುರಾಣಿಕ್, ಕುಸುಮ ಬಾಲಚಂದ್ರ, ಸತ್ಯನಾರಾಯಣರಾವ್, ಮುರುಳಿಧರ, ರಾಜೇಶ್, ವೈ.ಜೆ.ಕೃಷ್ಣ, ಹೆಚ್.ಎಸ್.ಸುಧೀಂದ್ರ ಹೆಬ್ಬಾರ್,ಲಿಂಗಪ್ಪ ಕಗ್ಗಲಿ, ಆರ್.ರಂಗಸ್ವಾಮಿ, ಗಣೇಶ್‌ಪ್ರಸಾದ್, ರಾಜೇಶ್, ಶ್ರೀನಿವಾಸ ಗ್ಯಾರೇಜ್, ಲಕ್ಷ್ಮಣ ಗವಟೂರು, ರಾಘು ದೊಡ್ಡಿನಕೊಪ್ಪ, ಸುಹಾಸ್, ಡಿ.ಈ.ರವಿಭೂಷಣ, ಮೆಣಸೆ ಆನಂದ, ಯೋಗೇಂದ್ರಗೌಡ, ಮೋಹನ್, ಹರೀಶ್‌ ಶಂಕರ್ ಶರಾಫ್, ಹರೀಶ್ ಪ್ರಭು, ರವಿ ಶಬರೀಶ್‌ನಗರ, ನಾಗರಾಜ್, ದೇವದಾಸ್ ಆಚಾರ್, ಕೆ.ಎ.ಅರವಿಂದ, ಡಾ.ಶಶಿಧರಪೈ, ಜೆ.ರಾಧಾಕೃಷ್ಣ, ರಾಮಚಂದ್ರಪ್ಪ ಇನ್ನಿತರರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here