ರಿಪ್ಪನ್‌ಪೇಟೆ: ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿದ ಪೊಲೀಸ್ ವೃತ್ತ ನಿರೀಕ್ಷಕ ಮಧುಸೂದನ್

0
667

ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ 54ನೇ ವರ್ಷದ ಗಣೇಶಮೂರ್ತಿ ಪ್ರತಿಷ್ಠಾಪನೆಯ ನಂತರ ಹೊಸನಗರ ವೃತ್ತ ನಿರೀಕ್ಷಕ ಡಿ.ಈ. ಮಧುಸೂದನ್ ಮತ್ತು ಪಿಎಸ್‌ಐ ಶಿವಾನಂದಕೋಳಿ ಮತ್ತು ಸಿಬ್ಬಂದಿವರ್ಗ ಸಮಿತಿಯವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ವಿಘ್ನನಿವಾರಣೆಗಳೊಂದಿಗೆ ಶಾಂತಿ ಸುವ್ಯವಸ್ಥೆಯಿಂದ ಉತ್ಸವ ಜರುಗಲೆಂದು ಪ್ರಾರ್ಥಿಸಿದರು.

ಎಂ.ಬಿ.ಮಂಜುನಾಥ ಮಾತನಾಡಿ, ಐದು ದಿನಗಳ ಕಾಲ ನಡೆಯುವ ಈ ಗಣೇಶೋತ್ಸವು ಮಂಗಳವಾರ ಮಧ್ಯಾಹ್ನ ವಿಸರ್ಜನೆಗೊಳಿಸುವ ಮುನ್ನ ಶಿವಮೊಗ್ಗ ರಸ್ತೆಯ ಮೂಲಕ ಹೊಸನಗರ ರಸ್ತೆಯಲ್ಲಿನ ತಾವರೆಕೆರೆಯಲ್ಲಿ ಜಲಸ್ಥಂಭನಗೊಳಿಸಲಾಗುವುದು ಹಣ್ಣು-ಕಾಯಿ ಮಾಡಿಸಲು ಅವಕಾಶವಿಲ್ಲ ಗಣೇಶನಿಗೆ ಹಾರಹಾಕಿ ಸ್ವಾಗತಿಸಲು ಓರ್ವರಿಗೆ ಅವಕಾಶವಿದೆ. ಕೊರೊನಾ ಹಿನ್ನಲೆಯಿಂದಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಮೆರವಣಿಗೆ ಇರುವುದಿಲ್ಲ ಭಕ್ತಾಭಿಮಾನಿಗಳು ಸಹಕರಿಸುವಂತೆ ಮನವಿ ಮಾಡಿ, ಗಣೇಶ ಬೇಗ ಕೊರೊನಾ ಮುಕ್ತಗೊಳಿಸಲೆಂದು ಮನೆಯಲ್ಲಿ ಪ್ರಾರ್ಥಿಸುವಂತೆ ಕೋರಿದ್ದಾರೆ.

ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾದ ಉತ್ಸವ ಸಮಿತಿ ಅಧ್ಯಕ್ಷ ಎಲ್.ವೈ.ಯೋಗೀಶ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಕೆದಲುಗುಡ್ಡೆ, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಸುಧೀಂದ್ರ ಪೂಜಾರಿ, ಆರ್.ರಾಘವೇಂದ್ರ, ಡಿ.ಈ.ರವಿಭೂಷಣ, ಹೆಚ್.ಎನ್.ಉಮೇಶ್, ಸುದೀರ್, ವೈ.ಜೆ.ಭಾಸ್ಕರ್, ತೀರ್ಥೇಶ್ ಅಡಿಕಟ್ಟು, ವೀರಭದ್ರಪ್ಪಗೌಡರು, ಅಶೋಕ ಹಾಲುಗುಡ್ಡೆ, ಎಸ್.ದಾನಪ್ಪ, ಸುಹಾಸ್

ಗಣೇಶೋತ್ಸವ ಸಮಿತಿಯ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here