ರಿಪ್ಪನ್‌ಪೇಟೆ: ವಿಜೃಂಭಣೆಯೊಂದಿಗೆ ಪ್ರತಿಷ್ಠಾವರ್ಧಂತಿ ಮಹೋತ್ಸವ ಸಂಪನ್ನ

0
432

ರಿಪ್ಪನ್‌ಪೇಟೆ: ಇಲ್ಲಿನ ತಿಲಕ್ ನಗರದ ಶ್ರೀ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನದ 18ನೇ ವರ್ಷದ ಪ್ರತಿಷ್ಠಾವರ್ಧಂತಿ ಮಹೋತ್ಸವವು ಇಂದು ವಿಜೃಂಭಣೆಯೊಂದಿಗೆ ಹರತಾಳು ಶ್ರೀಗುರುರಾಘವೇಂದ್ರಸ್ವಾಮಿ ಮಠದ ಅರ್ಚಕರ ನೇತೃತ್ವದಲ್ಲಿ ನಡೆದು ಸಂಭ್ರಮದೊಂದಿಗೆ ಸಂಪನ್ನಗೊಂಡಿತು.

18ನೇ ವರ್ಷದ ಪ್ರತಿಷ್ಠಾವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀನಾಗದೇವರ ಸನ್ನಿಧಿಯಲ್ಲಿ ಕಲಾಹೋಮ, ನವಕಪ್ರಧಾನ ಕಲಶ, ಅಧಿವಾಸ ಹೋಮ, ಪವಮಾನ ಅಭಿಷೇಕ, ಆಶ್ಲೇಷ ಬಲಿ ರಕ್ತೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀದುರ್ಗಾಹೋಮ, ಕಲಶಾಭಿಷೇಕ, ಮಹಾಪೂಜೆ ತೀರ್ಥಪ್ರಸಾದ ವಿನಿಯೋಗ ನಂತರ ಸಾರ್ವಜನಿಕರಿಗೆ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.

ಕೊರೊನಾ ಸಂಕಷ್ಟದ ಸ್ಥಿತಿಯಲ್ಲಿಯೂ ಇಲ್ಲಿನ ದೇವಸ್ಥಾನ ಸೇವಾ ಸಮಿತಿಯವರು ಸ್ಯಾನಿಟೈಜರ್ ಮಾಸ್ಕ್ ಹಾಗೂ ಸಾಮಾಜಿಕ ಅಂತರದೊಂದಿಗೆ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಇಂದಿನ ವಿಶೇಷವಾಗಿತ್ತು.

ದೇವಸ್ಥಾನ ಸೇವಾ ಸಮತಿ ಅಧ್ಯಕ್ಷ ಡಿ.ಎಸ್.ರಾಜೇಶ್, ಪ್ರಧಾನ ಕಾರ್ಯದರ್ಶಿ ಶೋಭಾ ವಿಶ್ವನಾಥ ಸಂಘಟನಾ ಕಾರ್ಯದರ್ಶಿ ಆರ್.ರಂಗಸ್ವಾಮಿ, ಕೆ.ಗಣೇಶ್‌ಪ್ರಸಾದ್, ರವಿಶೆಟ್ಟಿ, ನಾಗರಾಜ್, ವಾಸುಶೆಟ್ಟಿ, ಬಿ.ಕೆ.ಹರೀಶ್, ತಿಮ್ಮಪ್ಪಶೆಟ್ಟಿ, ಸಾವಿತ್ರಮ್ಮ, ರಮೇಶ್, ರವಿರಾಜಪ್ರಭು, ಆದರ್ಶ, ಗಣೇಶ್‌ರಾವ್‌ ಬೋಕ್ರಿ, ರಾಮಚಂದ್ರ ವಿ.ಶೇಟ್ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here