ರಿಪ್ಪನ್‌ಪೇಟೆ ಶಿವಮಂದಿರದ ಅಭಿವೃದ್ಧಿಗೆ ರಂಭಾಪುರಿ ಪೀಠದಿಂದ ಒಂದು ಲಕ್ಷ ರೂ. ದೇಣಿಗೆ

0
376

ರಿಪ್ಪನ್‌ಪೇಟೆ: ಮಲೆನಾಡಿನ ಹೃದಯ ಭಾಗವಾಗಿರುವ ರಿಪ್ಪನ್‌ಪೇಟೆಯ ಶ್ರೀ ಬಸವೇಶ್ವರ ವೀರಶೈವ ಸಮಾಜದವರು ಸರ್ಕಾರದ ಅನುದಾನದಡಿಯಲ್ಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಬಿ.ಎಸ್.ಯಡಿಯೂರಪ್ಪ ಸಭಾಭವನದ ಕಾಮಗಾರಿಯನ್ನು ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು ವೀಕ್ಷಣೆ ನಡೆಸಿ ಪೀಠದಿಂದ ಒಂದು ಲಕ್ಷ ರೂ. ದೇಣಿಗೆಯನ್ನು ನೀಡುವುದರೊಂದಿಗೆ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುವುದಾಗಿ ತಿಳಿಸಿದರು.

ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿ ನಿರ್ಮಾಗೊಳ್ಳುತ್ತಿರುವ ಶ್ರೀ ಬಸವೇಶ್ವರ ವೀರಶೈವ ಸಮಾಜದ ಶಿವಮಂದಿರದ ಬಿ.ಎಸ್.ಯಡಿಯೂರಪ್ಪ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಟ್ಟಡ ಕಾಮಗಾರಿ ವೀಕ್ಷಣೆಯ ನಂತರ ಸಮಾಜ ಭಾಂದವರ ಸಮಾಲೋಚನಾ ಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಇತ್ತೀಚಿನ ದಿನಗಳಲ್ಲಿ ವೀರಶೈವ ಸಮಾಜ ಹರಿದು ಹಂಚಿ ಹೋಗಿದ್ದು ಅದನ್ನು ಸಂಘಟಿಸುವ ಮೂಲಕ ಸಮಾಜದಲ್ಲಿ ಏಕತೆ ಮತ್ತು ಸಾಮರಸ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಗುರುವಿರಕ್ತರು ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು ಸಮಾಜ ಭಾಂದವರ ಒಗಟ್ಟಿನೊಂದಿಗೆ ಐಕ್ಯತೆಯನ್ನು ಕಾಪಾಡುವಂತೆ ಕರೆ ನೀಡಿದರು.

ಮಳಲಿ ಮಠದ ಡಾ.ಗುರುನಾಗಭೂಷಣ ಶಿವಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು.

ಈ ಸಭೆಯಲ್ಲಿ ಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ್ಷರಾದ ಜಿ.ಎಂ.ದುಂಡರಾಜಪ್ಪಗೌಡ, ಎಂ.ಆರ್.ಶಾಂತವೀರಪ್ಪಗೌಡ, ಡಿ.ಎಸ್.ರಾಜಶಂಕರ್, ಡಿ.ಸಿ.ಈಶ್ವರಪ್ಪ, ಎಲ್.ವೈ.ದಾನೇಶಪ್ಪ, ಹಾಲಸ್ವಾಮಿಗೌಡರು ಬೆಳಕೋಡು,‌ ಬಿ.ವಿ,ನಾಗಭೂಷಣ್, ನೆವಟೂರು ಈಶ್ವರಪ್ಪ, ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ಲು, ಹೆಚ್.ಎಂ. ವರ್ತೇಶಪ್ಪಗೌಡ ಹುಗುಡಿ, ಜಂಬಳ್ಳಿ ಶಾಂತಕುಮಾರ್, ಹೆಚ್.ಎಸ್.ರವಿ ಹಾಲುಗುಡ್ಡೆ. ಡಿ.ಈ.ಮಧುಸೂಧನ್, ಎಂ.ಆರ್.ಅಶೋಕ್, ಕಗ್ಗಲಿ ನಿಂಗಪ್ಪ, ನಂಜುಡಪ್ಪ ಹಿಲ್ಕುಂಜಿ, ಜಿ.ಡಿ.ಮಲ್ಲಿಕಾರ್ಜುನ, ಬಿ.ಕೆ.ಚಿದಾನಂದ, ತಳಗಿಬೈಲು ಈರಣ್ಣ, ದೂನ ಕುಮಾರಸ್ವಾಮಿ, ಬೆನವಳ್ಳಿ ಲಿಂಗಪ್ಪ, ಕೆ.ಎನ್.ರಾಜಶೇಖರ್ ಇನ್ನಿತರರು ಸಮಾಜ ಭಾಂದವರು ಹಾಜರಿದ್ದರು.

ಹೆಚ್.ಎಂ.ವರ್ತೇಶ್‌ಗೌಡರು ಸ್ವಾಗತಿಸಿ ನಿರೂಪಿಸಿದರು. ಡಿ.ಈ.ಮಧುಸೂದನ್ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here