ರಿಪ್ಪನ್‌ಪೇಟೆ: ಶ್ರದ್ಧಾ ಭಕ್ತಿಯಿಂದ ನೆರವೇರಿದ ಲಕ್ಷ್ಮೀ ಪೂಜೆ

0
525

ರಿಪ್ಪನ್‌ಪೇಟೆ: ದೀಪಾವಳಿಯ ಅಮವಾಸ್ಯೆಯ ದಿನವಾದ ಇಂದು ಲಕ್ಷ್ಮೀ ಪೂಜೆಯನ್ನು ಶ್ರದ್ದಾಭಕ್ತಿಯಿಂದ ಇಲ್ಲಿನ ಅಂಗಡಿ, ಹೋಟೆಲ್ ಇನ್ನಿತರ ಉದ್ಯಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಮುತ್ತೈದೆಯರು ಸೇರಿದಂತೆ ಬಂಧು-ಬಳಗದವರು ಪೂಜೆಯೊಂದಿಗೆ ಸಂಭ್ರಮಿಸಿದರು.

ಸಂಜೆ ನಡೆಯ ಬೇಕಾಗಿದ್ದ ಲಕ್ಷ್ಮೀ ಪೂಜೆಯನ್ನು ಬೆಳಗ್ಗೆಯಿಂದಲೇ ಕೆಲವರು ಆಚರಿಸಿದರೆ ಹಲವರು ಸಂಜೆಗೆ ಇಟ್ಟುಕೊಂಡಿದ್ದಾರೆ ಒಟ್ಟಾರೆಯಾಗಿ ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದಾಗಿ ಹಬ್ಬ-ಹರಿದಿನಗಳಿಗೆ ಬ್ರೇಕ್‌ ಬಿದ್ದಿದ್ದು ಜನರು ಹಬ್ಬದ ಖುಷಿಯಿಲ್ಲದ ಸ್ಥಿತಿಯಲ್ಲಿದ್ದರು ಆದರೆ ಈ ಬಾರಿ ಕೊರೊನಾ ಮಹಾಮಾರಿ ಕಡಿಮೆಯಾಗಿದ್ದು ಶಾಲಾ-ಕಾಲೇಜ್‌ಗಳು ಆರಂಭಗೊಂಡು ಲಾಕ್‌ಡೌನ್ ತೆರವುಗೊಂಡ ಪರಿಣಾಮದಿಂದಾಗಿ ಜನರು ಮಕ್ಕಳು ತಾಯಂದಿರು ಹಬ್ಬದ ಖುಷಿಯಲ್ಲಿ ಪಟಾಕಿ, ನೋನಿ ಹೀಗೆ ಗೋಪೂಜೆ, ವರ್ಷತೊಡಕು, ನರಕ ಚತುರ್ದಶಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಸಂಭ್ರಮಿಸಲು ಸಿದ್ದತೆ ನಡೆಸಿದ್ದಾರೆ.

ರಿಪ್ಪನ್‌ಪೇಟೆಯ ಕೆ.ಆರ್.ಬಿ ಅಡಿಟ್ ಕಛೇರಿಯಲ್ಲಿ, ಪದ್ಮಾಶ್ರೀ ಕ್ಯಾಂಟಿನ್, ಜನಔಷಧಿ ಕೇಂದ್ರ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆಯು ಜರುಗಿತು.

ಜಾಹಿರಾತು

LEAVE A REPLY

Please enter your comment!
Please enter your name here