ರಿಪ್ಪನ್‌ಪೇಟೆ: ಸರಳ ಕನ್ನಡ ರಾಜ್ಯೋತ್ಸವ ಆಚರಣೆ

0
373

ರಿಪ್ಪನ್‌ಪೇಟೆ: 66ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಇಲ್ಲಿನ ಗ್ರಾಮಾಡಳಿತ ಇಂದು ಆಚರಿಸಿತು.

ಕನ್ನಡದ ಖ್ಯಾತ ಚಿತ್ರನಟ ಪುನೀತ್‌ ರಾಜ್‍ಕುಮಾರ್ ನಿಧನದಿಂದಾಗಿ ರಾಜ್ಯ-ದೇಶವೆ ಶೋಕಾಚರಣೆಯಲ್ಲಿರುವ ಇಂತಹ ಸಂದರ್ಭದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಿಸುವುದಾರು ಹೇಗೆ? ಎಂಬ ಚಿಂತೆ ಎಲ್ಲರನ್ನು ಕಾಡುವಂತಾಗಿದ್ದು ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಆ ನಿಟ್ಟಿನಲ್ಲಿ ನವೆಂಬರ್ 1 ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಬೇಕಾಯಿತು ಎಂದು ಹಲವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಸ್ಥಳೀಯ ಕಲಾಕೌಸ್ತುಭ ಕನ್ನಡ ಸಂಘ ಹಾಗೂ ಇನ್ನಿತರ ಕನ್ನಡಪರ ಸಂಘಟನೆಗಳು ಇದೇ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸುವ ಉದ್ದೇಶದಿಂದಾಗಿ ಸ್ಥಳೀಯಾಡಳಿತ ಸಂಪ್ರದಾಯದಂತೆ ಸರಳವಾಗಿ ಆಚರಿಸುತ್ತಿರುವುದಾಗಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಹೇಳಿದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯರಾದ ಪಿ. ರಮೇಶ್ ಡಿ.ಈ.ನಾಗಭೂಷಣ, ಎನ್.ಚಂದ್ರೇಶ್, ವನಮಾಲಾ, ಸುಧೀಂದ್ರ ಪೂಜಾರಿ, ಆರ್.ರಾಘವೇಂದ್ರ, ರೈತಸಂಘದ ಜಿಲ್ಲಾಉಪಾಧ್ಯಕ್ಷ ಆರ್.ಎನ್.ಮಂಜಪ್ಪ, ಪಿಡಿಓ ಜಿ.ಚಂದ್ರಶೇಖರ್, ಕಲಾಕೌಸ್ತುಭ ಕನ್ನಡ ಸಂಘದ ನೂತನ ಅಧ್ಯಕ್ಷೆ ಉಮಾ ಸುರೇಶ್, ಶ್ರೀಧರ್, ದಾನಮ್ಮ, ವಿನೋಧ, ದೀಪಾ ಸುಧೀರ್ ಗ್ರಾಮ ಪಂಚಾಯ್ತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಹುಂಚ ವರದಿ:

ಇಂದು ಇಲ್ಲಿನ ಹುಂಚದ ಶ್ರೀ ಪದ್ಮಾಂಬ ಪ್ರೌಢಶಾಲೆಯಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಗರ್ತಿಕೆರೆ:

ಸರ್ಕಾರಿ ಪದವಿ ಪೂರ್ವ ಕಾಲೇಜು ಅಮೃತ ಇಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here