ರಿಪ್ಪನ್‌ಪೇಟೆ: ಸರ್ಕಾರಿ ಐಟಿಐ ಕಾಲೇಜು ಕಟ್ಟಡದ ಕಾಮಗಾರಿಯನ್ನು ಪರಿಶೀಲನೆ ಮಾಡಿ ತೀವ್ರ ಅಸಮಾದಾನ ವ್ಯಕ್ತಪಡಿಸಿದ ಶಾಸಕ ಹರತಾಳು ಹಾಲಪ್ಪ…! ಯಾಕೆ ಗೊತ್ತಾ?

0
673

ರಿಪ್ಪನ್‌ಪೇಟೆ: ಪಟ್ಟಣದ ಹೊರವಲಯದ ಕೆದಲುಗುಡ್ಡೆ ಎಂಬಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಐಟಿಐ ಕಾಲೇಜ್ ಕಟ್ಟಡದ ಕಾಮಗಾರಿಯನ್ನು ಶಾಸಕ ಹಾಗೂ ಎಂ.ಎಸ್.ಐ.ಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಗುರುವಾರ ಪರಿಶೀಲನೆ ನಡೆಸುವ ಮೂಲಕ ತೀವ್ರ ಅಸಮದಾನವನ್ನು ವ್ಯಕ್ತಪಡಿಸಿದರು.

ಈ ಹಿಂದಿನ ಕ್ಷೇತ್ರದ ಶಾಸಕ ಕಾಗೋಡು ತಿಮ್ಮಪ್ಪನವರ ಅವಧಿಯಲ್ಲಿ ರಿಪ್ಪನ್‌ಪೇಟೆಗೆ ಸರ್ಕರಿ ಐಟಿಐ ಕಾಲೇಜು ಮಂಜೂರಾತಿ ಮಾಡಿಸುವುದರೊಂದಿಗೆ ಜಾಗವನ್ನು ಮಂಜೂರು ಮಾಡಿಸಿ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ ಐಟಿಐ ಕಾಲೇಜು ಊರಿನ ಮಧ್ಯದಲ್ಲಿ ವಾಹನ ಸೌಲಭ್ಯವಿರುವ ಕಡೆಯಲ್ಲಿದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದ್ದು ಕಾಮಗಾರಿ ಆರಂಭಕ್ಕೂ ಮುನ್ನ ನಮ್ಮ ಗಮನಕ್ಕೂ ತಾರದೆ ಆರಂಭಿಸಲಾಗಿ ಕಟ್ಟಡ ಗುಣಮಟ್ಟದಿಂದ ಕೂಡಿಲ್ಲ ಮತ್ತು ಪ್ಲಾನ್ ಸಹ ಸರಿಯಾಗಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿ, ಗುತ್ತಿಗೆದಾರನಿಂದ ಮಾಹಿತಿ ಪಡೆದು ಕಾಮಗಾರಿ ಆರಂಭದ ಹಂತದಲ್ಲಿಯೇ ಕಟ್ಟಡದಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿತು. ಈಗಾಗಲೇ ಕಟ್ಟಡ ಮೇಲೆರಿದ್ದು ಗೋಡೆಗಳನ್ನು ಪುನಃ ಕೆಡುವುದು ಸೂಕ್ತವಲ್ಲ. ಆದಷ್ಟು ನೀಲನಕ್ಷೆಯಂತೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರನಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ವೀರೇಶ್ ಅಲವಳ್ಳಿ, ಜಿ.ಪಂ.ಸದಸ್ಯ ಸುರೇಶ್ ಸ್ವಾಮಿರಾವ್, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಗ್ರಾ.ಪಂ.ಸದಸ್ಯರಾದ ಸುಂದರೇಶ್, ಜಿ.ಡಿ.ಮಲ್ಲಿಕಾರ್ಜುನ, ಅಶ್ವಿನಿ ರವಿಶಂಕರ್, ಪರಮೇಶ್ ಹೊನ್ನಕೊಪ್ಪ, ದಿವಾಕರ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಮುಖಂಡರಾದ ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಆರ್.ಟಿ.ಗೋಪಾಲ್, ಎನ್.ಸತೀಶ್, ಮಂಡಾನಿ ಮೋಹನ್, ಕೇತಾರ್ಜಿರಾವ್, ತುಳೋಜಿರಾವ್, ಹರತಾಳು ರಾಮಚಂದ್ರ, ಕೆ.ಬಿ.ಹೂವಪ್ಪ, ದೇವೇಂದ್ರಪ್ಪ, ನೆವಟೂರು, ಬಾಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ, ಬೆಳ್ಳೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬುಕ್ಕಿವರೆ ರಾಜೇಶ್, ಸದಸ್ಯ ಬೆಳ್ಳೂರು ತಿಮ್ಮಪ್ಪ, ಮೆಣಸೆ ಆನಂದ, ಗುತ್ತಿಗೆದಾರ ದೀಪು ಮತ್ತಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here