ರಿಪ್ಪನ್ಪೇಟೆ: ಇತಿಹಾಸ ಪ್ರಸಿದ್ದ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಏ. 23 ಮತ್ತು 24 ರಂದು ಸಿದ್ದಿವಿನಾಯಕ ಸ್ವಾಮಿ ಮತ್ತು ಅನ್ನಪೂರ್ಣೇಶ್ವರಿ ಅಮ್ಮನವರ ಐದನೇ ವರ್ಷದ ಪ್ರತಿಷ್ಠಾವರ್ಧಂತ್ಯುತ್ಸವ ಮತ್ತು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶಿವಮೊಗ್ಗದ ವೇದಮೂರ್ತಿ ಬ್ರಹ್ಮಶ್ರೀ ವಸಂತಭಟ್ ಅಗಮಿಕರು ಮತ್ತು ದೇವಸ್ಥಾನದ ಅರ್ಚಕರ ಸಹಯೋಗದಲ್ಲಿ ಜರುಗಲಿದೆ.
ಏ. 23 ರಂದು ಶನಿವಾರ ಬೆಳಗ್ಗೆ ಆಗಮಿಕರ ಪರಿವಾರವನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಲಾಗುವುದು ನಂತರ 10.30ಕ್ಕೆ ದೇವತಾಪ್ರಾರ್ಥನೆ ಗಣಪತಿಪೂಜೆ ಸ್ವಸ್ತಿಪುಣ್ಯಾಹವಾಚನ ನಾಂದಿ ಸಮಾರಾಧನೆ ಮಹಾಸಂಕಲ್ಪ ಋತ್ವಗ್ವರಣ ಷಣ್ಣಾರಿಕೇಳ ಗಣಹೋಮ ನವಗ್ರಹ ಹೋಮ ತೀರ್ಥಪ್ರಸಾದ ವಿನಿಯೋಗ.
ಸಂಜೆ ಸಿದ್ದಿವಿನಾಯಕ ಸ್ವಾಮಿ ಸನ್ನಿಧಿಯಲ್ಲಿ ಮಂಡಲ ರಚನೆ, ಪಂಚಶತ ಪರಿಕಲಶಸಹಿತ ಬ್ರಹ್ಮಕಲಶ ಸ್ಥಾಪನೆ, ಪೂಜಾದಿಗಳು ಮತ್ತು ಅಧಿವಾಸ ಹೋಮ, ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪಂಚವಿಂಶತಿ ದ್ರವ್ಯ ಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ ಪೂಜಾದಿಗಳು ಜರುಗಲಿದೆ.
ಏ. 24 ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಸಿದ್ದಿವಿನಾಯಕ ಸ್ವಾಮಿ ಮತ್ತು ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಧಾನದಲ್ಲಿ ಕಲಾವೃದ್ಧಿ ಹೋಮ, ಕನಕಾಭಿಷೇಕ, ಕುಂಭಾಭಿಷೇಕ ಹಾಗೂ ಭಜನಾ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ.
ಈ ಧಾರ್ಮಿಕ ಸಮಾರಂಭಕ್ಕೆ ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ವ ಸೇವಾ ಕಾರ್ಯದೊಂದಿಗೆ ಭಾಗವಹಿಸಿ ದೇವರ ದರ್ಶನಾಶೀರ್ವಾದವನ್ನು ಪಡೆದುಕೊಳ್ಳುವಂತೆ ದೇವಸ್ಥಾನ ಧರ್ಮದರ್ಶಿ ಸೇವಾ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related