ರಿಪ್ಪನ್‌ಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ವರ್ಷದ ಮೊದಲ ವರ್ಷಧಾರೆ‌ !

0
487

ರಿಪ್ಪನ್‌ಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂದು ಸಂಜೆ ಈ ವರ್ಷದ ಮೊದಲ ವರ್ಷಧಾರೆಯಿಂದ ಪ್ರಾಣಿಗಳ ಸಂಕುಲಕ್ಕೆ ಮತ್ತು ನಾಗರಿಕರಿಗೆ ಸಂತಸವಾಗಿದೆ.

ಕಳೆದ 5 ತಿಂಗಳಿಂದ ಮಳೆಯಿಲ್ಲದೆ ಬೇಸತ್ತು ಹೋಗಿದ್ದ ಪ್ರಾಣಿ ಸಂಕುಲಕ್ಕೆ, ಗಿಡಮರ ಮರಗಳಿಗೆ, ಸಸ್ಯ ಜೀವಿಗಳಿಗೆ ಹಾಗೂ ನಾಗರಿಕರಿಗೆ ಇಂದು ಸಂಜೆ ಸುರಿದ ಮಳೆಯಿಂದ ಸಂತಸದ ಜೊತೆಗೆ ರಣ ತಾಪಕ್ಕೆ ಬೇಸತ್ತು ಹೋಗಿದ್ದ ಮನಗಳಿಗೆ ಹಾಗೂ ಜೀವಸಂಕುಲಕ್ಕೆ ತಂಪೆರೆದಂತಾಗಿದೆ.

ಕಳೆದ 5 ತಿಂಗಳಿನಿಂದ ರಿಪ್ಪನ್‌ಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯ ಅಭಾವದಿಂದ ಕುಡಿಯುವ ನೀರಿಗೂ ಸಹ ತೊಂದರೆಯಾಗುವ ಸಂಭವವಿತ್ತು. ಇಂದು ಸುರಿದ ಮಳೆಯಿಂದ ಅದರಲ್ಲೂ ವಿಶೇಷವಾಗಿ ಪ್ರಾಣಿ ಸಂಕುಲಕ್ಕೆ ಮತ್ತು ಸಸ್ಯ ಜೀವಿಗಳಿಗೆ ಸ್ವಲ್ಪಮಟ್ಟಿಗಾದರೂ ನೀರಿನ ಜೊತೆಗೆ ತಂಪಿನ ವಾತಾವರಣ ದೊರೆತಂತಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here