ರಿಪ್ಪನ್‌ಪೇಟೆ: ಹಿಂದೂ ಮಹಾಸಭಾ ಗಣೇಶನ ವಿಸರ್ಜನಾ ಮೆರವಣಿಗೆಗೆ ಚಾಲನೆ

0
1437

ರಿಪ್ಪನ್‌ಪೇಟೆ: ಐದು ದಿನಗಳ ಕಾಲ ಪ್ರತಿಷ್ಠಾಪಿಸಲಾದ ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯವರ 54ನೇ ವರ್ಷದ ಗಣಪತಿ ಉತ್ಸವದ ವಿಸರ್ಜನಾ ಮೆರವಣಿಗೆಗೆ ದೇವಸ್ಥಾನ ಧರ್ಮದರ್ಶಿ ಹಾಗೂ ಸಮಿತಿ ಅಧ್ಯಕ್ಷ ಗಣೇಶ್ ಕಾಮತ್ ಮತ್ತು ಜೀರ್ಣೋದ್ಧಾರ ಸಮತಿ ಅಧ್ಯಕ್ಷ ಎನ್.ಸತೀಶ್, ಹಿಂದೂ ಮಹಾಸಭಾ ಅಧ್ಯಕ್ಷ ಎಂ.ಬಿ.ಮಂಜುನಾಥ್ ರವರು ಚಾಲನೆ ನೀಡಿದರು.

ತಿಲಕ ಮಹಾಮಂಟಪದಲ್ಲಿ ಪ್ರತಿಷ್ಟಾಪಿಸಲಾದ ಗಣೇಶನ ವಿಸರ್ಜನಾ ಮೆರವಣಿಗೆ ಮಧ್ಯಾಹ್ನ ಶಿವಮೊಗ್ಗ ರಸ್ತೆಯಿಂದ ಹೊರಟು ವಿನಾಯಕ ವೃತ್ತದ ಬಳಿ ಬರುತ್ತಿದ್ದಂತೆ ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಬೇದುಲ್ಲಾ ಷರೀಫ್ ಹಾಗೂ ಗ್ರಾಮ ಪಂಚಾಯತಿ ರಿಪ್ಪನ್‌ಪೇಟೆ ಆಡಳಿತ ಮಂಡಳಿಯವರು ಮಹಾಗಣಪತಿಗೆ ಹಾರ ಹಾಕಿ ಸ್ವಾಗತಿಸಿದರು.

ಸರಳ ಸಂಪ್ರದಾಯದಂತೆ ಗಣೇಶ ಉತ್ಸವಕ್ಕೆ ಜಾನಪದ ಕಲಾತಂಡಗಳಿಲ್ಲದೆ ಸಪ್ಪೆಯಾದರೂ ಕೂಡಾ ಯುವಕರ ಸಮೂಹ ಗಣೇಶನಿಗೆ ಜೈಕಾರ ಹಾಕಿ ಪಾದಯಾತ್ರೆಯ ಮೂಲಕ ಸಾಗಿರುವುದು ವಿಶೇಷವಾಗಿತ್ತು.

ಗಲಾಟೆ, ಗೌಜು ಮಾಡದೆ ಶಾಂತವಾಗಿ ಭಕ್ತರು ಪಾದಯಾತ್ರೆಯ ಮೂಲಕ ಭಾರಿ ಮಳೆಯಲ್ಲಿಯೂ ಉತ್ಸವ ಹೊರಟು ಹೊಸನಗರ ರಸ್ತೆಗೆ ಬರುತ್ತಿದ್ದಂತೆ ಮಳೆ ಕಡಿಮೆಯಾಗಿ ಭಕ್ತರು ಸಮೂಹ ಕೊರೊನಾ ಮಾರ್ಗಸೂಚಿಯನ್ವಯ ಸಾಗಿದರು.

ಉತ್ಸವ ಸಮಿತಿ ಅಧ್ಯಕ್ಷ ಎಲ್.ವೈ. ಯೋಗೇಶ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಕೆದಲುಗುಡ್ಡೆ, ಹಿಂದೂ ಮಹಾಸಭಾ ಸೇವಾ ಸಮಿತಿಯ ಅಧ್ಯಕ್ಷರಾದ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಸುಧೀಂದ್ರ ಪೂಜಾರಿ, ವಿನಾಯಕ ದೇವಸ್ಥಾನದ ಧರ್ಮದರ್ಶಿ ಗಣೇಶ್ ಕಾಮತ್, ಜೀರ್ಣೋದ್ಧಾರ ಸಮತಿಯ ಅಧ್ಯಕ್ಷ ಎನ್.ಸತೀಶ್, ವೈ.ಜೆ.ಕೃಷ್ಣ, ಹೆಚ್.ಎನ್. ಚೋಳರಾಜ್, ಆರ್.ರಾಘವೇಂದ್ರ, ಆರ್.ಈ.ಭಾಸ್ಕರ್, ರಾಘವೇಂದ್ರ, ಶ್ರೀನಿವಾಸ ಆಚಾರ್, ಮುರುಳಿ ಕೆರೆಹಳ್ಳಿ, ಸತೀಶ್ ಶೆಟ್ಟಿ, ರವಿಭೂಷಣ, ಭೀಮರಾಜ್, ಲಕ್ಷ್ಮಣ, ಸುಹಾಸ್, ಸೀನಾ ಗ್ಯಾರೇಜ್, ಮಂಜು ಗವಟೂರು,ಸತೀಶ್,ನವೀನ್ ಗವಟೂರು, ಸಂದೀಪಶೆಟ್ಟಿ, ರಾಜೇಶ್, ರಂಜನ್, ನವೀನ್‌, ಮೋಹನ್, ಗುರು ಆಟೋ, ಶ್ರೀಧರ, ನಾಗರತ್ನ ದೇವರಾಜ್, ಜಯಲಕ್ಷ್ಮೀ, ಸರಸ್ವತಿ, ವನಮಾಲ, ಹೆಚ್.ಎನ್.ಉಮೇಶ್, ನಿತ್ಯನಂದಾ ಹೆಗಡೆ, ಸಾಗರ ಉಪವಿಭಾಗಾಧಿಕಾರಿಗಳು, ಹೊಸನಗರ ತಹಶೀಲ್ದಾರ್, ಉಪತಹಶೀಲ್ದಾರ್, ಪೊಲೀಸ್ ಇಲಾಖೆಯ ಡಿವೈಎಸ್‌ಪಿ, ವೃತ್ತನಿರೀಕ್ಷಕ ಮಧುಸೂದನ್, ಪಿಎಸ್‌ಐ ಶಿವಾನಂದ ಕೋಳಿ, ಉಪತಹಶೀಲ್ದಾರ್ ಹುಚ್ಚರಾಯಪ್ಪ, ಡಿಆರ್ ಪೊಲೀಸ್ ಅಗ್ನಿಶಾಮಕದಳ ಇನ್ನಿತರರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here