ರಿಪ್ಪನ್‌ಪೇಟೆ: 1.25 ಲಕ್ಷ ರೂ. ಗೆ ವಾರದ ಸಂತೆ ಹರಾಜು

0
778

ರಿಪ್ಪನ್‌ಪೇಟೆ: 1.25 ಲಕ್ಷ ರೂ. ಗಳಿಗೆ ಇಂದು ನಡೆದ ವಾರದ ಸಂತೆ ಹರಾಜು ನಡೆಯಿತು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುಳಾ ಕೇತಾರ್ಜಿರಾವ್ ಅಧ್ಯಕ್ಷತೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ನಾಲ್ವರು ಹರಾಜಿಗೆ ಠೇವಣಿ ಹಣ ಸಂದಾಯ ಮಾಡಿ ಬಿಡ್ ಕರೆದರು.

ಇದೇ ಸಂದರ್ಭದಲ್ಲಿ ಕೆಲವು ಹರಾಜು ನಿಯಮಗಳನ್ನು ಅಭಿವೃದ್ದಿ ಅಧಿಕಾರಿ ಓದಿದರು. ಸಂತೆಗೆ ಹಾಕುವ ಅಂಗಡಿಯವರಿಂದ ಹೆಚ್ಚಿನ ಮೊತ್ತ ವಸೂಲಿ ಮಾಡುವ ಹಾಗಿಲ್ಲ. ನಿಗದಿ ಪಡಿಸಲಾದ ಮೊತ್ತದಂತೆ ವಸೂಲಾತಿ ಮಾಡುವುದು ಹರಾಜು ಹಿಡಿದವರು ವಸೂಲಿ ಹಕ್ಕು ಹೊಂದಿದ್ದು ಒಳ ಒಪ್ಪಂದ ಮಾಡಿಕೊಳ್ಳುವಂತಿಲ್ಲ, ವಸೂಲಿ ಸಂದರ್ಭದಲ್ಲಿ ಹರಾಜು ಪಡೆದ ವ್ಯಕ್ತಿ ಹಾಜರಿರಬೇಕು,ಮತರಕಾರಿ ತರುವ ವಾಹನಗಳಿಗೆ ಪಾರ್ಕಿಂಗ್ ಸ್ಥಳ ಮತ್ತು ಪ್ರತಿಗಾಡಿಗೆ 5 ರೂ. ಶುಲ್ಕ ವಸೂಲಿ ಮಾಡುವುದು ಸಾರ್ವಜನಿಕ ವಾಹನಗಳಿಗೆ 2 ರೂ‌. ತೆರಿಗೆ ವಸೂಲಿ ಮತ್ತು ಪಾರ್ಕಿಂಗ್ ವ್ಯವಸ್ಥೆ ಪ್ರತ್ಯೇಕ ಮಾಡುವುದು, ಸ್ವಚ್ಚತೆಗೆ ಮೊದಲ ಆಧ್ಯತೆ, ಎಲ್ಲಿ ಬೇಕಾದಲ್ಲಿ ಕಸ ಎಸೆಯುವ ಹಾಗಿಲ್ಲ, ಸಂತೆ ಅಂಗಡಿಯವರೊಂದಿಗೆ ಸೌಜನ್ಯದಿಂದ ವರ್ತಿಸುವುದು, ಹೆಚ್ಚಿನ ಅಂಗಡಿಗಳನ್ನು ಸಂತೆ ಕಟ್ಟೆಯಲ್ಲಿಯೇ ಹಾಕಿಸುವ ವ್ಯವಸ್ಥೆ ಮಾಡುವುದು ಇನ್ನಿತರ ನಿಯಮಗಳನ್ನು ಗ್ರಾಮಾಡಳಿತ ನಿರ್ಧರಿಸುತ್ತದೆ ಎಂದರು.

ಈ ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಮಹಾಲಕ್ಷ್ಮೀ,‌ ಸದಸ್ಯರಾದ ಗಣಪತಿ, ಎನ್.ಚಂದ್ರೇಶ್, ಪಿ.ರಮೇಶ್, ಆಶೀಫ್, ವೇದಾವತಿ, ಧನಲಕ್ಷ್ಮೀ, ದೀಪಾ, ನಿರೂಪಮ, ಸಾರಾಬಿ, ಡಿ.ಈ. ಮಧುಸೂದನ್, ಜಿ.ಡಿ.ಮಲ್ಲಿಕಾರ್ಜುನ, ಸುಧೀಂದ್ರ ಪೂಜಾರಿ, ಪಂಚಾಯಿತಿ ಸಿಬ್ಬಂದಿ ವರ್ಗ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here