ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಿಸಲು ಮುಂದಾದ KSRTC !

0
358

ಚಿಕ್ಕಮಗಳೂರು: ಕೆಲ ತಿಂಗಳುಗಳಿಂದ ಏರುತ್ತಿರುವ ತೈಲ ಬೆಲೆಯಿಂದ ರೋಸಿ ಹೊರಗಿರುವ ಸಾಮಾನ್ಯ ಜನತೆಗೆ ಚಿಕ್ಕಮಗಳೂರು ವಿಭಾಗದ ಕೆ.ಎಸ್.ಆರ್.ಟಿ.ಸಿ ಯಿಂದ ಭರ್ಜರಿ ಆಫರ್ ಒಂದನ್ನು ನೀಡಲಾಗಿದೆ.

ಸಾರ್ವಜನಿಕ ಪ್ರತಿನಿತ್ಯ ಸಂಚರಿಸಲು ಹೆಚ್ಚಿನದಾಗಿ ತಮ್ಮ ಖಾಸಗಿ ವಾಹನಗಳನ್ನು ಬಳಸುತ್ತಿದ್ದು ಈಗಿನ ತೈಲ ಬೆಲೆ ಏರಿಕೆಯಿಂದ ವಾಹನಗಳನ್ನು ಬಳಸಲು ಹಿಂದೆಟ್ಟು ಹಾಕುವಂತಹ ವಾತಾವರಣ ನಿರ್ಮಾಣವಾಗಿದ್ದು ಇದನ್ನು ಅರ್ಥ ಮಾಡಿಕೊಂಡಿರುವ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಧಿಕಾರಿ ವೀರೇಶ್ ಗ್ರಾಮಾಂತರ ಭಾಗಗಳನ್ನು ಒಳಗೊಂಡಂತೆ ರಿಯಾಯಿತಿ ದರದಲ್ಲಿ ನೂತನ ರೀತಿಯ ಪಾಸ್ ವ್ಯವಸ್ಥೆ ಮಾಡಿದ್ದಾರೆ.

ನೂತನ ಪಾಸ್ ದರ ಪಟ್ಟಿಯುನ್ನು ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿದ್ದು ಚಿಕ್ಕಮಗಳೂರಿನಿಂದ ಕಡೂರಿಗೆ 25 ದಿನಗಳ ಪ್ರಯಾಣದ ಟಿಕೇಟ್ ದರ ರೂ.2250 ಆಗುತ್ತದೆ. ಈ ಪಾಸ್ ಖರೀದಿಸಿದ್ರೆ ರೂ.1550 ಆಗಲಿದ್ದು ಸುಮಾರು ರೂ. 700ರವರೆಗೆ ಉಳಿತಾಯವಾಗಲಿದೆ.

ಅದೆ ರೀತಿ ಚಿಕ್ಕಮಗಳೂರಿನಿಂದ ಮೂಡಿಗೆರೆ ರೂ.1350, ಸಖರಾಯಪಟ್ಟಣ ರೂ.1100, ಆಲ್ದೂರು ರೂ.1100, ಬೇಲೂರು ರೂ. 1250, ಹಾಸನ ರೂ. 2150, ಬೀರೂರು ರೂ.1700, ತರೀಕೆರೆ ರೂ.2250, ಭದ್ರಾವತಿ ರೂ. 2450, ಶಿವಮೊಗ್ಗ ರೂ.2650, ಬಾಳೆಹೊನ್ನೂರು ರೂ.2000, ಕೊಟ್ಟಿಗೆಹಾರ ರೂ. 2000, ಸಕಲೇಶಪುರ ರೂ. 2000, ಅರೇಹಳ್ಳಿ ರೂ. 1700, ಕಳಸಾಪುರ ರೂ. 1250, ಜಾವಗಲ್ ರೂ. 1550, ಬಾಣಾವರ ರೂ. 1700, ಹಗರೆ ರೂ. 1700, ಹಳೇಬೀಡು ರೂ. 1700, ಮಲ್ಲೇನಹಳ್ಳಿ ರೂ. 1100, ಜಿಲ್ಲಾ ಪಂಚಾಯಿತಿ ರೂ.450, ಶೃಂಗೇರಿ ರೂ. 2550, ಕಡಬಗೆರೆ ರೂ. 1700 ಹಾಗೂ ಮಾಗಡಿ ಹ್ಯಾಂಡ್‌ ಪೋಸ್ಟ್ ಗೆ ರೂ. 700ಗಳ ನೂತನ ಬಸ್ ಪಾಸ್ ವ್ಯವಸ್ಥೆಯನ್ನು ಮಾಡಿದ್ದಾರೆ.

ಈ ಬಸ್ ಪಾಸ್ ಗಳನ್ನು ತಮ್ಮ ಕರ್ತವ್ಯದ ಸ್ಥಳದಲ್ಲಿಯೇ ನವೀಕರಣ ಮಾಡಿಕೊಳಬಹುದಾಗಿದ್ದು, ಚಿಲ್ಲರೆಯ ಸಮಸ್ಯೆ ಉದ್ಭವಿಸುವುದಿಲ್ಲ, ಜೊತೆಗೆ ಶೇ. 30 ರಿಂದ 35 ರಷ್ಟು ಹಣವನ್ನು ತಿಂಗಳಲ್ಲಿ ಉಳಿಯಲಿದೆ ಹಾಗೂ ಮಿತಿ ಇಲ್ಲದೆ ಪ್ರಯಾಣ ಮಾಡಬಹುದು.

ಸಂಸ್ಥೆಯ ಬಸ್ ಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಬಹುದಾಗಿದ್ದು, ಈ ಅವಕಾಶವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here