ರಿಷಬ್‌ಶೆಟ್ಟಿ ನೂತನ ಚಿತ್ರಕ್ಕೆ ಶಿವಮೊಗ್ಗದಲ್ಲಿ ನಾಳೆ ಆಡಿಷನ್

0
456

ಶಿವಮೊಗ್ಗ: ಚಿತ್ರನಟ, ನಿರ್ದೇಶಕ ರಿಷಿಬ್ ಶೆಟ್ಟಿ ಪ್ರೊಡೆಕ್ಷನ್‌ನ ನೂತನ ಚಲನಚಿತ್ರಕ್ಕೆ ಕಲಾವಿದರ ಆಯ್ಕೆ ಮಾಡಿಕೊಳ್ಳಲು ಶಿವಮೊಗ್ಗ ನಗರದಲ್ಲಿ ಆಡಿಷನ್ ನಡೆಯಲಿದೆ.

ಜೂ.21ರ ಮಂಗಳವಾರ ನಾಳೆ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಪಕ್ಕದ ಕೋಟೆ ಬಯಲು ರಂಗಮಂದಿರದಲ್ಲಿ ನಡೆಯುವುದು.

5 ರಿಂದ 10 ವರ್ಷದೊಳಗಿನ ಬಾಲ ಕಲಾವಿದರು, 20ರಿಂದ 30, 50 ರಿಂದ 65 ವರ್ಷದ ಪುರುಷರು ಪೋಷಕ ಪಾತ್ರಕ್ಕೆ ಹಾಗೂ 20 ರಿಂದ 35 ವರ್ಷದ ವಯಸ್ಸಿನ ಮಹಿಳೆಯರು ಪೋಷಕ ಪಾತ್ರಕ್ಕೆ ಬೇಕಾಗಿದ್ದಾರೆ.

ಈ ಆಡಿಷನ್‌ಗೆ ಕಲಾವಿದರು ಯಾವುದೇ ವಿಶೇಷ ಪೋಷಾಕು ಹಾಗೂ ಮೇಕಪ್ ರಹಿತವಾಗಿ ಆಗಮಿಸಲು ಕೋರಿದೆ.

ಜಾಹಿರಾತು

LEAVE A REPLY

Please enter your comment!
Please enter your name here