ರೇಣುಕಾಚಾರ್ಯ ದೇವಾಲಯದಲ್ಲಿ ವಿಶೇಷ ಪೂಜೆ

0
71

ಚಿಕ್ಕಮಗಳೂರು: ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಪ್ರತಿ ವರ್ಷ ಮಾರ್ಚ್ 16 ರಂದು ರಾಜ್ಯಾದ್ಯಂತ ಆಚರಿಸಲು ಐತಿಹಾಸಿಕ ನಿರ್ಧಾರ ಕೈಗೊಂಡಿರುವುದನ್ನು ಸ್ವಾಗತಿಸಿ ಮಂಗಳವಾರ ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಮುಖಂಡರು ನಗರದ ರೇಣುಕಾ ಚಾರ್ಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಮಾತನಾಡಿದ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಚಂದ್ರಮೌಳಿ ಅಖಿಲ ಭಾರತ ವೀರಶೈವ ಮುಖಂಡರ ಮನವಿ ಮೇರೆಗೆ ರೇಣುಕಾಚಾರ್ಯ ಜಯಂತಿ ಆಚರಿಸಲು ತೀರ್ಮಾನ ಕೈಗೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮಹಾಸಭಾ ವತಿಯಿಂದ ಕೃತಜ್ಞತೆ ಸಲ್ಲಿಸಿದರು.

ರೇಣುಕಾಚಾರ್ಯರು ಈ ಜಗತ್ತಿನ ಎಲ್ಲ ಧರ್ಮ, ಜಾತಿ ಜನಾಂಗದವರಿಗೆ ಮಾನವಿಯತೆ ಸಂದೇಶ ಸಾರಿದ್ದಾರೆ. ಧರ್ಮ ಎಂದರೆ ಅದು ಕೇವಲ ಮನುಷ್ಯ ಧರ್ಮ ಮಾತ್ರ. ಅದಕ್ಕೆ ಯಾವ ಪಂಥ, ಪಂಗಡಗಳಿಲ್ಲ ಎಂದು ಸ್ಪಷ್ಟಪಡಿಸಿದ್ದು, ಜಾತಿ ರಹಿತ, ಧರ್ಮ ರಹಿತ ಸಂದೇಶ ಸಾರಿದವರು ರೇಣುಕಾಚಾ ರ್ಯರು ಎಂದರು.

ಸಮಾಜದಲ್ಲಿ ಬದುಕುವ ಮನುಷ್ಯನು ಸಂಸ್ಕಾರವಂತರಾಗಿ ಬಾಳಲು ಹಾಗೂ ಮಾನವೀಯ ಮೌಲ್ಯವನ್ನು ಬೆಳಸಿಕೊಳ್ಳಲು ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಶ್ರೀ ರೇಣುಕಾಚಾರ್ಯರು ರಚಿಸಿದ್ದಾರೆ. ವೀರಶೈವ ಧರ್ಮದಲ್ಲಿ ಪ್ರತಿಯೊಬ್ಬರು ಕೂಡಾ ಇಷ್ಟಲಿಂಗ ಪೂಜೆಯನ್ನು ಪ್ರತಿನಿತ್ಯ ನೆರವೇರಿಸುವುದರಿಂದ ಮನಸ್ಸಿನಲ್ಲಿ ಶಾಂತಿ ಉಂಟಾಗುವ ಜೊತೆಗೆ ಶಿವನ ಒಲುಮೆಯಾಗುತ್ತದೆ ಎಂದು ಹೇಳಿದರು.

ಮಹಾಸಭಾದ ಮಾಜಿ ಪ್ರಧಾನ ಕಾರ್ಯದರ್ಶಿ ಈಶ್ವರಪ್ಪ ಕೋಟೆ, ತಾಲೂಕು ಅಧ್ಯಕ್ಷ ಏಕಾಂತರಾಮು, ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಸ್ವಾಮಿ, ವೀರಶೈವ ಗುಂಡಾಭಕ್ತ ಸಂಘದ ಅಧ್ಯಕ್ಷ ಸಣ್ಣಪ್ಪ, ಪಂಚಾಚಾರ್ಯ ಸೇವಾ ಸಮಿತಿ ಮಾಜಿ ಅಧ್ಯಕ್ಷ ಇಂದಾವರ ಲೋಕೇಶ್, ಯುವಮುಂದಾಳು ವೀರೇಶ್, ರೇಣುಕಾಚಾರ್ಯ ಕಲ್ಯಾಣ ಮಂಟಪ ವ್ಯವಸ್ಥಾಪಕ ಮಂಜುನಾಥ್, ದೇವಾಲಯ ಅರ್ಚಕ ಮುಪ್ಪಯ್ಯ, ಸಿ. ಎಸ್. ಮಂಜಪ್ಪ, ದೇವಾನಂದ್ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here