ರೈತನಿಗೆ ವಂಚನೆ ವಿರೋಧಿಸಿ ಹೋರಾಟಗಾರ ಟಿ.ಆರ್. ಕೃಷ್ಣಪ್ಪನಿಂದ ಅರೆ ಬೆತ್ತಲಾಗಿ ತಲೆಕೆಳಗಾಗಿ ನಿಂತು ವಿನೂತನ ಪ್ರತಿಭಟನೆ

0
1090

ರಿಪ್ಪನ್‌ಪೇಟೆ: ಗವಟೂರು ಗ್ರಾಮದ ಕಂದಾಯ ಇಲಾಖೆಯ ಸರ್ವೆ ನಂಬರ್ 157/2 ರಲ್ಲಿ ಪರಿಶಿಷ್ಟ ಜನಾಂಗದ ಫಲಾನುಭವಿಗೆ 2 ಎಕರೆ ಜಮೀನು ದರಖಾಸ್ತು ಯೋಜನೆಯಡಿ ಮಂಜೂರು ಮೂಡುವ ಮೂಲಕ ಹಕ್ಕು ಪತ್ರವನ್ನು ನೀಡಲಾಗಿದ್ದರೂ ಕೂಡಾ ಸದರಿ ಜಾಗವನ್ನು ಎಂ.ಪಿ.ಎಂ ಅರಣ್ಯ ಇಲಾಖೆಗೆ 40 ವರ್ಷಕ್ಕೆ ಲೀಸ್ ನೀಡಲಾಗಿ ಅವರು ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಮರಗಳನ್ನು ಬೆಳಸಿ ಕಟಾವು ಮಾಡಲಾಗುತ್ತಿದ್ದು ಈ ಜಾಗ ಪರಿಶಿಷ್ಟ ಜನಾಂಗದ ನಾಗಪ್ಪ ಎಂಬುವರಿಗೆ ಮಂಜೂರಾಗಿ ಹಕ್ಕುಪತ್ರ ಸಹ ಇದ್ದು ಗಿಡಗಳನ್ನು ಫಲಾನುಭವಿಯೇ ಬೆಳೆಸಲಾಗಿತ್ತೆಂದು ಏಕಾಂಗಿ ಹೋರಾಟಗಾರ ರಿಪ್ಪನ್‌ಪೇಟೆಯ ಟಿ.ಆರ್.ಕೃಷ್ಣಪ್ಪ ಪೊಲೀಸ್ ಠಾಣೆಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ಅರ್ಜಿ ನೀಡುವ ಮೂಲಕ ಇಂದು ಇಲ್ಲಿನ ಗ್ರಾಮ ಪಂಚಾಯತ್ ಎದುರು ಅರೆ ಬೆತ್ತಲಾಗಿ ತಲೆಕೆಳಗಾಗಿ ನಿಲ್ಲುವುದರೊಂದಿಗೆ ನ್ಯಾಯಕ್ಕಾಗಿ ಹೋರಾಟ ನಡೆಸಿದ ಘಟನೆ ನಡೆಯಿತು.

ಕಳೆದ ಸುಮಾರು 15 ವರ್ಷಗಳ ಹಿಂದೆ ಸದರಿ ಜಾಗವನ್ನು ಪರಿಶಿಷ್ಟ ಜನಾಂಗದ ನಾಗಪ್ಪ ಎಂಬುವರು ಸಾಗುವಳಿ ಮಾಡಿಕೊಂಡಿದ್ದು ಈ ಜಾಗವನ್ನು ದರಖಾಸ್ತು ಯೋಜನೆಯಡಿ ಮಂಜೂರಾತಿ ಮಾಡುವ ಮೂಲಕ ನಾಗಪ್ಪನವರ ಹೆಸರಿಗೆ ಖಾತೆ ಪಹಣಿ ದಾಖಲಾಗಿದ್ದು ಇದೇ ಜಾಗದಲ್ಲಿ ಎಂ.ಪಿ.ಎಂ ಅರಣ್ಯ ಇಲಾಖೆಯವರು ಪ್ಲಾಂಟೇಷನ್ ಮಾಡುವುದರೊಂದಿಗೆ ಈಗ ಕಟಾವು ಮಾಡುತ್ತಿದ್ದು ಈ ಬಗ್ಗೆ ಇಲಾಖೆಯ ವಲಯ ಅರಣ್ಯಾಧಿಕಾರಿಗಳ ಗಮನ ಸೆಳೆಯಲಾಗಿ ನಮಗೆ ಈ ಹಿಂದೆ ಒಟ್ಟು 40 ವರ್ಷದ ಅವಧಿಗೆ ಲೀಸ್ ನೀಡಲಾಗಿದೆ ಎಂದು ಹೇಳಿ ಬೆಳೆದ ಅಕೇಶಿಯಾ ಮರಗಳ ಕಟಾವು ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಆರೋಪಿಸಿ ಈ ಕೂಡಲೇ ಕಟಾವು ತಡೆ ಹಿಡಿದು ಪರಿಶಿಷ್ಟ ಜಾತಿಯ ನಾಗಪ್ಪನಿಗೆ ನ್ಯಾಯಕೊಡಿಸಿ ಎಂದು ತೀರ್ಥಹಳ್ಳಿ ಡಿವೈಎಸ್‌ಪಿಯವರಿಗೆ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಅರ್ಜಿ ನೀಡುವುದರೊಂದಿಗೆ ಇಂದು ಬೆಳಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಮುಂಭಾಗ ಅರೆ ಬೆತ್ತಲೆಯಾಗಿ ತಲೆಕೆಳಗಾಗಿ ನಿಂತು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಜಾಹಿರಾತು

LEAVE A REPLY

Please enter your comment!
Please enter your name here