ರೈತರಿಂದ ಸಂತೆ ಸುಂಕ ಅಕ್ರಮವಾಗಿ ವಸೂಲಿ ಮಾಡುತ್ತಿರುವ ಸುಂಕದಾರರು ; ರೈತರಿಗೆ ನ್ಯಾಯ ಒದಗಿಸುವಂತೆ ಮನವಿ

0
386

ಸಾಗರ: ತಾಲ್ಲೂಕಿನ ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತಿದ್ದು, ಗ್ರಾಮ ಪಂಚಾಯಿತಿಯು ಪ್ರತಿ ವರ್ಷವು ನಡೆಸುವ ಹರಾಜ್ ಇಸ್ತಿಹಾರ್ ನಲ್ಲಿ ಅತೀ ಹೆಚ್ಚು ಬಿಡ್ ದಾರನಿಗೆ ಗ್ರಾಮ ಪಂಚಾಯಿತಿಯು ಸುಂಕದಾರರನಿಗೆ ಗ್ರಾಮ ಪಂಚಾಯಿತಿಯ ಸಂತೆ ಸುಂಕ ನಿಗದಿತ ದರದ ಪಟ್ಟಿಯಂತೆ ರಶೀದಿ ಸಹಿತ ಸುಂಕ ವಸೂಲಿ ಮಾಡುವಂತೆ ಅಧಿಕೃತವಾಗಿ ಸುಂಕದಾರರಿಗೆ ಆದೇಶ ಹೊರಡಿಸಿದ್ದಾರೂ ಗ್ರಾಮ ಪಂಚಾಯಿತಿ ಆದೇಶವನ್ನೇ ಉಲ್ಲಂಘನೆ ಮಾಡಿ ಸ್ಥಳೀಯ ಹಾಗೂ ದೂರ ದೂರದಿಂದ ರೈತರು ತಾವುಗಳು ಬೆಳೆದ ತರಕಾರಿ ಇನ್ನಿತರ ಸರಕು ಸಾಮಗ್ರಿಗಳನ್ನೂ ಸಂತೆಗೆ ಮಾರಾಟ ಮಾಡುವ ರೈತರಿಂದ ಅಕ್ರಮವಾಗಿ ರಶೀದಿ ನೀಡದೇ, ವಿಪರೀತ ಸುಂಕ ಅಂದರೆ ಪ್ರತಿ ರೈತರ ತರಕಾರಿ ಅಂಗಡಿಯವರಿಂದ 100 ರಿಂದ 150 ಕ್ಕೂ ಹೆಚ್ಚು ಸುಂಕ ವಸೂಲಿ ಮಾಡುತ್ತಿರುವ ಸಂತೆ ಸುಂಕದಾರರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಸಂಭಂದಪಟ್ಟ ಮೇಲಾಧಿಕಾರಿಗಳಿಗೆ ಕೋಡಿಹಳ್ಳಿ ಚಂದ್ರಶೇಖರ್ ಗೌರವಾನ್ವಿತ ರಾಜ್ಯಾಧ್ಯಕ್ಷರು ಕರ್ನಾಟಕ ರೈತ ಸಂಘ ರವರು ವೀರಭದ್ರ ನಾಯ್ಕ್ ಮಳವಳ್ಳಿ ರವರ ನಿವಾಸಕ್ಕೆ ಭೇಟಿಯ ತಾಳಗುಪ್ಪ ರೈತರ ಸಮಾವೇಶಕ್ಕೆ ಆಗಮಿಸಿದ್ದ ಸಂದರ್ಭದ ಪೂರ್ವದಲ್ಲಿ ವೀರಭದ್ರ ನಾಯ್ಕ ಸಿದ್ದಾಪುರ (ಉ.ಕ.) ಅಧ್ಯಕ್ಷರು ಕರ್ನಾಟಕ ರೈತ ಸಂಘ, ಓಂಕಾರ ಎಸ್. ವಿ. ತಾಳಗುಪ್ಪ,ಲಕ್ಷಣ ಮಳವಳ್ಳಿ, ಬೈರಪ್ಪ ಹಸುವಂತೆ, ಮಂಜು ಸೈದೂರು ಇನ್ನಿತರ ರೈತ ಮುಖಂಡರುಗಳು, ರೈತ ಭಾಂದವರು ರೈತರ ಶೋಷಣೆ ವಿರುದ್ಧ ಸೂಕ್ತ ನ್ಯಾಯ ನೀಡುವಂತೆ ಮನವಿ ಸಲ್ಲಿಸಿದರು.

ಈ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, “ಶಿವಮೊಗ್ಗ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿ ರೈತರ ಈ ಶೋಷಣೆ ವಿರುದ್ಧ ಧ್ವನಿಯಾಗಿ ರೈತರಿಗೆ ನ್ಯಾಯ ನೀಡುವುದಾಗಿ ಭರವಸೆ ನೀಡಿದರು.

ವರದಿ : ಓಂಕಾರ ಎಸ್. ವಿ. ತಾಳಗುಪ್ಪ
ಜಾಹಿರಾತು

LEAVE A REPLY

Please enter your comment!
Please enter your name here