ರೈತರಿಗೆ, ಪೊಲೀಸರಿಗೆ ತಲೆನೋವಾದ ಕೋಡೂರು, ಬೆಳಂದೂರು ಸುತ್ತಮುತ್ತ ಅಡಿಕೆ, ರಬ್ಬರ್ ಶೀಟ್ ಕಳ್ಳತನ ಪ್ರಕರಣ: ಬೆಳೆಗಾರರಿಂದ ಠಾಣೆಗೆ ದೂರು !

0
3357

ರಿಪ್ಪನ್‌ಪೇಟೆ: ಕಳೆದ ಒಂದು ತಿಂಗಳಿಂದ ಕೋಡೂರು, ಬೆಳಂದೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಡಿಕೆ ಮತ್ತು ರಬ್ಬರ ಶೀಟ್‌ಗಳ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದ್ದ ಈ ಗ್ರಾಮಗಳ ರೈತರು ಠಾಣೆಗೆ ಬಂದು ದೂರು ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕೋಡೂರು ವ್ಯಾಪ್ತಿಯಲ್ಲಿ ಕಳೆದ 15-20 ದಿನಗಳಿಂದ ಗ್ರಾಮದಲ್ಲಿ ರೈತರ ತೋಟದಲ್ಲಿ ಅಡಿಕೆಯನ್ನು ಕಳ್ಳತನ ಮಾಡಿ ಗ್ರಾಮದ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಲಾಗುತ್ತಿರುವುದಾಗಿ ಹಲವು ಸಂಶಯಾಸ್ಪದ ವ್ಯಕ್ತಿಗಳ ವಿರುದ್ದ ಠಾಣೆಗೆ ದೂರು ನೀಡಲಾಗಿದೆ. ಹಾಗೆಯೇ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಬೆಳಂದೂರು, ದೂನ, ಬೆನವಳ್ಳಿ ಗ್ರಾಮದಲ್ಲಿ ಸಹ ರಬ್ಬರ್ ಶೀಟ್‌ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದಾರೆಂದು ರೈತರು ದೂರು ನೀಡಿದ್ದಾರೆ.

ಒಟ್ಟಾರೆಯಾಗಿ ರೈತ ಸಮುದಾಯಕ್ಕೆ ಮತ್ತು ಪೊಲೀಸ್ ಇಲಾಖೆಯವರಿಗೆ ಈ ರೀತಿಯಲ್ಲಿ ಕಳ್ಳತನ ತಲೆನೋವಾಗಿ ಪರಿಣಮಿಸಿದೆ.

ಒಂದು ಕಡೆಯಲ್ಲಿ ಅಡಿಕೆ ಕಟಾವು ಮಾಡಲು ಹಾಗೂ ರಬ್ಬರ್ ಟ್ಯಾಪಿಂಗ್ ಮಾಡಲು ಮಳೆ ಅಡ್ಡಿಯಾಗಿದ್ದರೆ ಬೆಲೆ ಏರಿಕೆಯಿಂದಾಗಿ ಕೆಲವರು ಕಳ್ಳತನದ ಮಾರ್ಗವನ್ನು ಹಿಡಿದಿರುವುದು ರೈತರಲ್ಲಿ ಭಯ ಹುಟ್ಟಿಸಿದೆ ಎಂದು ಕೋಡೂರು ಡಿ.ಟಿ.ಚಂದ್ರಶೇಖರ, ಜಯಪ್ರಕಾಶ್‌ಶೆಟ್ಟಿ, ಸುಧೀರ್ ಭಟ್, ಕೋಡೂರು ವಿಜೇಂದ್ರರಾವ್, ಅನಂತಮೂರ್ತಿ, ಬೆಳಂದೂರು ಬಿ.ವಿ.ನಾಗಭೂಷಣ, ಬಿ.ಕೆ.ಚಿದಾನಂದ, ಪ್ರಕಾಶ್, ವೀರೇಶ್ ಇನ್ನಿತರರು ತಮ್ಮ ನೋವನ್ನು ಮಾಧ್ಯಮದವರ ಹಂಚಿಕೊಂಡರು.

ಜಾಹಿರಾತು

LEAVE A REPLY

Please enter your comment!
Please enter your name here