23.2 C
Shimoga
Sunday, November 27, 2022

ರೈತರು ಇಬ್ಬರು ತಾಯಂದಿರನ್ನು ಹೊಂದಿರುತ್ತಾರೆ ; ಬಿ.ಎಸ್ ಯಡಿಯೂರಪ್ಪ

ಶಿಕಾರಿಪುರ : ರೈತರು ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ. ಇಂತಹಾ ರೈತರು ಇಬ್ಬರು ತಾಯಂದಿರನ್ನು ಹೊಂದಿರುತ್ತಾರೆ ಒಂದು ಹೆತ್ತ ತಾಯಿ ಮತ್ತೊಬ್ಬರು ಭೂತಾಯಿ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ತಿಳಿಸಿದರು.

ಇಂದು ಶಿಕಾರಿಪುರದ ಎಪಿಎಂಸಿಯಲ್ಲಿ ಕೃಷಿ ಇಲಾಖೆ ಹಾಗೂ ತಾಲ್ಲೂಕು ಕೃಷಿಕ ಸಮಾಜದ ವತಿಯಿಂದ ಲೋಕಸಭಾ ಸದಸ್ಯರ ನಿಧಿ ಅಡಿ ತಾಲ್ಲೂಕು ಕೃಷಿಕ ಸಮಾಜದ ಮೊದಲನೇ ಅಂತಸ್ತಿನ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಜನತೆಯು ತಾವು ಬದುಕುಳಿಯಲು ಅನ್ನ ಆಹಾರ ಪದಾರ್ಥಗಳನ್ನು ಬಳಸುತ್ತಿದ್ದು, ಈ ಅನ್ನ ಆಹಾರ ಪದಾರ್ಥಗಳನ್ನು ಬೆಳೆಯುವ ರೈತರು ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ ಇಂತಹಾ ರೈತರು ಇಬ್ಬರು ತಾಯಂದಿರನ್ನು ಹೊಂದಿರುತ್ತಾರೆ ಒಂದು ಹೆತ್ತ ತಾಯಿ ಮತ್ತೊಬ್ಬರು ಭೂತಾಯಿ. ಆದ್ದರಿಂದ ಪ್ರತಿ ರೈತರಿಗೆ ನಾವು ರಕ್ಷಿಸುವವುದರ ಜೊತೆಗೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸ ಆಗಬೇಕಾಗಿದೆ ಎಂದರು.

ರೈತರು ಆಧುನಿಕ ವೈಜ್ಞಾನಿಕ ರೀತಿಯನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡಬೇಕಲ್ಲದೇ, ಸರ್ಕಾರಗಳಿಂದ ರೈತರಿಗೆ ಆಧುನಿಕ ತಂತ್ರಜ್ಞಾನ ಬಳಸಿ ಆಹಾರ ಪದಾರ್ಥಗಳನ್ನು ಬೆಳೆಯುವಂತೆ ಯೋಜನೆ ಜಾರಿಗೆ ತರಬೇಕಾಗಿದೆಯಲ್ಲದೇ, ಆತನನ್ನು ಸರಿಯಾದ ದಾರಿಯಲ್ಲಿ ಸಾಗಿಸುವ ಕೆಲಸ ಎಲ್ಲಾರೂ ಸೇರಿ ಮಾಡಬೇಕಿದೆ.1955 ರಲ್ಲಿ ಭಾರತೀಯ ಕೃಷಿಕ ಸಮಾಜ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ನಿರಾತಂಕವಾಗಿ ರೈತರು ಹೋರಾಟ ನಡೆಸುತ್ತಾ ಬಂದಿದ್ದು, ಅದೇ ರೀತಿಯಲ್ಲಿ ಅನೇಕ ಬುದ್ದಿವಂತ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಸರ್ಕಾರದಿಂದ ನೀಡಲಾಗುವ ಎಲ್ಲಾ ರೀತಿಯ ಯೋಜನೆಗಳನ್ನು ಸಮರ್ಪಕವಾಗಿ ಕೊಡಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ರೈತರ ಆದಾಯ ದ್ವಿಗುಣವಾಗಬೆಕು. ರೈತರು ಕೃಷಿಕ ಸಮಾಜದಲ್ಲಿ ಪಾಲ್ಗೊಂಡು ಇದರ ಲಾಭವನ್ನು ಪಡೆಯಬೇಕು. ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ಜನತೆಗೆ ಉತ್ತಮ ಆರೋಗ್ಯಕ್ಕೆ ನಾಂದಿಯಾಗಬೇಕು ಎಂದು ಸಲಹೆ ನೀಡಿದರು.

ಸಂಸದ ಬಿ ವೈ ರಾಘವೇಂದ್ರರವರು ಮಾತನಾಡಿ, ಶಿಕಾರಿಪುರ ತಾಲ್ಲೂಕಿನಲ್ಲಿ 2020-21 ನೇ ಸಾಲಿನಲ್ಲಿ 6 ಸಾವಿರದ 800 ಜನ ಅಡಿಕೆ ಬೆಳೆಗಾರ ರೈತರಿಗೆ ಬೆಳೆ ವಿಮೆ ಕಟ್ಟಿದ್ದೀರಿ ಅವರಿಗೆ ಈಗಾಗಲೇ ಹಣ ಜಮಾ ಮಾಡಲಾಗುತ್ತಿದ್ದು, ಶಿಕಾರಿಪುರ ತಾಲ್ಲೂಕಿಗೆ ಒಟ್ಟು 16 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುತ್ತಿದೆ. ಈ ಬಾರಿ ಅತಿ ಹೆಚ್ಚು ಮಳೆಯಾದ ಕಾರಣ ಯಾರು ಯಾರು ಮೆಕ್ಕೆಜೋಳಕ್ಕೆ ಬೆಳೆ ವಿಮೆ ಕಟ್ಟಿದ್ದೀರೋ ಅವರಿಗೆ  ಜಿಲ್ಲೆಯಲ್ಲಿ 13 ಕೋಟಿ ರೂಪಾಯಿ ಮೊತ್ತದ ಹಣದಲ್ಲಿ ಹತ್ತುಮುಕ್ಕಾಲು ಕೋಟಿ ರೂಪಾಯಿ ಶಿಕಾರಿಪುರದ ರೈತರಿಗೆ ಬಿಡುಗಡೆ ಮಾಡಲಾಗಿದೆ. ಹಾಗಂತ ಬೇರೆ ಬೇರೆ ತಾಲ್ಲೂಕಿನಲ್ಲಿ ಬೆಳೆ ವಿಮೆ ಬಂದಿಲ್ಲ ಎಂದು ಅರ್ಥವಲ್ಲ ಅಲ್ಲಿ ಬೆಳೆ ಬೆಳೆಗಳು ಹಾಳಾಗಿಲ್ಲ ಹಾಗೂ ಬೇರೆ ಬೇರೆ ತಾಲ್ಲೂಕಿನಲ್ಲಿ ಬೆಳೆ ವಿಮೆ ಕಟ್ಟಿರೋದು ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಬೆಳೆ ವಿಮೆ ಕಟ್ಟದೇ ಅತಿವೃಷ್ಟಿಯಿಂದ ಬೆಳೆಗಳು ಹಾನಿಗೊಳಗಾದ ರೈತರಿಗೆ ಒಟ್ಟು ಎಂಟು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಶಿಕಾರಿಪುರ ತಾಲ್ಲೂಕಿನ ರೈತರಿಗೆ ಮೂರು ಮುಕ್ಕಾಲು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಂಎಡಿಬಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೆ ರೇವಣಪ್ಪ, ಮಾಜಿ ಕಾಡಾ ಅಧ್ಯಕ್ಷ ಹಾಗೂ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ, ಉಪಾಧ್ಯಕ್ಷೆ ಪುಷ್ಪಾ ಮಂಜಪ್ಪ, ಪುರಸಭಾ ಅಧ್ಯಕ್ಷೆ ರೇಖಾಬಾಯಿ, ತಾಲ್ಲೂಕು ದಂಡಾಧಿಕಾರಿ ಕವಿರಾಜ್ ಎಂ ಪಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!