ರೈತರು ಕೃಷಿಯಿಂದ ವಿಮುಖರಾಗಬಾರದು: ಗಣೇಶ್ ಜೆ. ಕಮ್ಮಾರ್

0
240

ಹೊಸನಗರ: ಕೃಷಿ ರೈತರ ಜೀವನಾಡಿ ಆಗಿದೆ. ರೈತರು ಯಾವತ್ತೂ ಕೃಷಿಯನ್ನು ಕೈಬಿಟ್ಟು ವ್ಯವಹರಿಸಬಾರದು. ಕೃಷಿಯಿಂದ ವಿಮುಖರಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಗಣೇಶ್‌ ಜೆ. ಕಮ್ಮಾರ್ ಹೇಳಿದರು.

ಇಲ್ಲಿನ ಕೃಷಿ ಇಲಾಖೆ ಆವರಣದಲ್ಲಿ ನಡೆದ ರಾಷ್ಟ್ರೀಯ ಆಹಾರ ಭದ್ರತೆ ವಿಶೇಷ ಕಾರ್ಯಗಾರ ತರಬೇತಿ ಕಾರ‍್ಯಕ್ರಮದಲ್ಲಿ ಮಾತನಾಡಿ, ಕೃಷಿಯಲ್ಲಿ ರೈತರು ಸದಾ ಶ್ರಮದಲ್ಲಿ ತೊಡಗಿಕೊಂಡಲ್ಲಿ ಕೃಷಿ ಸವಾಲಿನ ಕೆಲಸವಲ್ಲ. ರೈತರಿಗೆ ಕೃಷಿ ಜೀವನ ಭದ್ರ ಆಗಿದೆ. ಅದನ್ನು ನಂಬಿ ಬದುಕಿದವರಿಗೆ ಯಾವತ್ತೂ ಸೋಲು ಇಲ್ಲವಾಗಿದೆ ಎಂದರು.

ಕೃಷಿ ಇಂದು ಆಧುನಿಕ ಸ್ಪರ್ಧೆಗೆ ಒಳಗಾಗಿದೆ. ಸುಧಾರಿತ ಯಂತ್ರೋಪಕರಣಗಳು ಸುಲಭ ದರದಲ್ಲಿ ಕೈಗೆಟುಕುವಂತಾಗಿದೆ. ಸರ್ಕಾರಗಳು ರೈತರಿಗೆ ಯೋಗ್ಯ ಸಬ್ಸಿಡಿ ನೀಡುತ್ತಿದ್ದು ರೈತರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಬಟ್ಟೆಮಲ್ಲಪ್ಪದ ಸಾರಾ ಸಂಸ್ಥೆಯ ಕುಮಾರ್ ಹಾಗೂ ಕಸಬಾ ವಲಯ ಕೃಷಿ ಅಧಿಕಾರಿ ಪ್ರತಿಮಾರವರು ರೈತರಿಗೆ ಆಹಾರ ಪದ್ದತಿಯಲ್ಲಿ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಸುಬ್ರಹ್ಮಣ್ಯ, ಆತ್ಮ ಯೋಜನೆಯ ವ್ಯವಸ್ಥಾಪಕ ವಾಸುಕಿ, ಕೃಷಿ ಅಧಿಕಾರಿ ಮಾರುತಿ, ಅಮೃತ, ಧನುಷ್, ಕೃಷಿ ಅಧಿಕಾರಿ ಶ್ರೀಧರ್, ಮಹೇಶ್, ಯಶೋಧ, ಜಯಲಕ್ಷ್ಮಿ ನಯಾನ, ಶಿಲ್ಪಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here