24.3 C
Shimoga
Friday, December 9, 2022

ರೈಲ್ವೆ ಗೇಟ್ ತಾಂತ್ರಿಕ ಪರಿಶೀಲನೆ ; ಮಾರ್ಗ ಬದಲಾವಣೆ

ಶಿವಮೊಗ್ಗ : ರೈಲ್ವೆ ಗೇಟ್ ಸಂಖ್ಯೆ 49 ರಲ್ಲಿ (ಸವಳಂಗ ರಸ್ತೆ, ಉಷಾ ನರ್ಸಿಂಗ್ ಹೋಂ ಹತ್ತಿರದ ರೈಲ್ವೆ ಗೇಟ್) ತಾಂತ್ರಿಕವಾಗಿ ಪರಿಶೀಲನೆ ಮಾಡಲು ದಿನಾಂಕ 11-11-22ರ ಬೆಳಿಗ್ಗೆ 7:00 ಗಂಟೆಯಿಂದ 12-11-22ರ ಬೆಳಿಗ್ಗೆ 7:00 ಗಂಟೆಯವರೆಗೆ ಗೇಟನ್ನು ಮುಚ್ಚುವುದರಿಂದ ತಾತ್ಕಾಲಿಕ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚರಿಸಲು ಆದೇಶಿಸಲಾಗಿದೆ.

ಶಿವಮೊಗ್ಗದಿಂದ ಸವಳಂಗ ಕಡೆಗೆ ಹೋಗುವ ಭಾರೀ ವಾಹನಗಳು :

ಶಿವಮೊಗ್ಗ ಬಸ್ ಸ್ಟಾಂಡ್-ಆಲ್ಕೋಳ ಸರ್ಕಲ್-ಆಯನೂರು-ಹಾರನಹಳ್ಳಿ – ಸವಳಂಗ ಮೂಲಕ ಕ್ರಮವಾಗಿ ಸಂಚರಿಸಬಹುದಾಗಿರುತ್ತದೆ.

ಶಿವಮೊಗ್ಗದಿಂದ ಸವಳಂಗ ಕಡೆಗೆ ಶಾಲಾ ಕಾಲೇಜು, ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್‌ಗಳು

ಶಿವಮೊಗ್ಗ ಬಸ್ ಸ್ಟ್ಯಾಂಡ್, ಸಾಗರ ರಸ್ತೆ -ಆಲ್ಕೋಳ -ವಿನೋಬನಗರ ಪೋಲಿಸ್ ಚೌಕಿ -ರಾಜಕುಮಾರ್ ಸರ್ಕಲ್ (ಮೇದಾರ ಕೇರಿ) ಬೊಮ್ಮನಕಟ್ಟೆ ರೈಲ್ವೆ ಗೇಟ್- ಬಸವನಗಂಗೂರು -ಹುಣಸೋಡು ಅಬ್ಬಲಗೆರೆ -ಎಡಕ್ಕೆ ತಿರುಗಿ ಸವಳಂಗ ರಸ್ತೆ ಮುಖಾಂತರ ವಾಹನಗಳು ಸಂಚರಿಸಬಹುದು.

ಸವಳಂಗ ಕಡೆಯಿಂದ ಶಿವಮೊಗ್ಗ ನಗರಕ್ಕೆ ಬರುವ ಶಾಲಾ ಕಾಲೇಜು, ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್‌ಗಳು

ನವುಲೆ ಗಣಪತಿ ದೇವಸ್ಥಾನ ಹತ್ತಿರ ಎಡಕ್ಕೆ ತಿರುಗಿ ತ್ರಿಮೂರ್ತಿ ನಗರ ರಾಗಿಗುಡ್ಡ ಚಾನಲ್ ಹತ್ತಿರ ಬಲಕ್ಕೆ ತಿರುಗಿ ಚಾನಲ್ ಏರಿ ಮೇಲೆ ಮಲ್ಲಿಕಾರ್ಜುನ ನಗರ ನೆಕ್ಸಾ ಶೋರೂಂ ಹತ್ತಿರ ಬಲಕ್ಕೆ ತಿರುಗಿ ಹೊನ್ನಳ್ಳಿ ರಸ್ತೆ ಸಂಗೊಳ್ಳಿರಾಯಣ್ಣ ಸರ್ಕಲ್ ಬಲಕ್ಕೆ ಕೆ. ಇ. ಬಿ ಸರ್ಕಲ್ ಮೂಲಕ ವಾಹನಗಳು
ಸಂಚರಿಸಬಹುದು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!