ಲಂಚ ಪಡೆಯುತ್ತಿರುವ ವೇಳೆ ಎಸಿಬಿ ದಾಳಿ ; ಇಬ್ಬರು ಮೆಸ್ಕಾಂ ಅಧಿಕಾರಿಗಳ ಬಂಧನ

0
1131

ಚಿಕ್ಕಮಗಳೂರು: ಮೆಸ್ಕಾಂನ ಇಬ್ಬರು ಎಕ್ಸಿಕ್ಯುಟಿವ್ ಇಂಜಿನಿಯರ್ ಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕಂಟ್ರಾಕ್ಟರ್ ರಿಂದ 7000 ರೂ. ಲಂಚ ಪಡೆಯುವ ವೇಳೆ ಈ ದಾಳಿ ನಡೆದಿದೆ.

ಮೆಸ್ಕಾಂ ಇ.ಇ ಮಂಜುನಾಥ್ ಟಿ.ಸಿ, ಎಇಇ ಚಿದಾನಂದ್ ಎಸ್. ಎಸಿಬಿ ಬಲೆಗೆ ಬಿದ್ದವರು.

ಕಂಟ್ರಾಕ್ಟರ್ ಅಭಿಷೇಕ್ ಎಂಬುವವರಿಂದ ಟಿ.ಸಿ (ಟ್ರಾನ್ಸ್‌ಫಾರ್ಮರ್) ಗೆ ಪವರ್ ಕನೆಕ್ಷನ್ ಕೊಡಲು 12 ಸಾವಿರಕ್ಕೆ ಬೇಡಿಕೆ ಇಟ್ಟು 5000 ಮೊದಲು ಪಡೆದು ಇಂದು 7000 ಪಡೆಯುವ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಎಸಿಬಿ ಡಿವೈಎಸ್ ಪಿ ಸುನೀಲ್ ಕುಮಾರ್ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ

ಜಾಹಿರಾತು

LEAVE A REPLY

Please enter your comment!
Please enter your name here