ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಸರ್ವೆ ಸೂಪರ್ ವೈಸರ್ !

0
295

ಮೂಡಿಗೆರೆ: ಜಮೀನಿನ ನಕ್ಷೆ ತಿದ್ದುಪಡಿ ಮಾಡಿಕೊಡಲು ನಾಲ್ಕು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸರ್ವೆ ಸೂಪರ್ ವೈಸರ್ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಪಟ್ಟಣದ ಸರ್ವೆ ಸೂಪರ್ ವೈಸರ್ ಆಗಿದ್ದ ಪ್ರಕಾಶ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಗೋಣಿಬೀಡು ಗ್ರಾಮದ ಮಹೇಶ್ ಎಂಬುವವರು ತಮ್ಮ ಜಮೀನಿನ ನಕ್ಷೆ ತಿದ್ದುಪಡಿ ಮಾಡುವ ಸಲುವಾಗಿ ಕಚೇರಿಗೆ ಬಂದಿದ್ದರು ಈ ವೇಳೆ ಸರ್ವೆ ಸೂಪರ್ ವೈಸರ್ ಪ್ರಕಾಶ್ ನಕ್ಷೆ ತಿದ್ದುಪಡಿ ಮಾಡಿಕೊಡಲು ನಾಲ್ಕು ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ.

ಈ ಕುರಿತು ಮಹೇಶ್ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದು ಅದರಂತೆ ನಾಲ್ಕು ಲಕ್ಷ ರೂ.ನಲ್ಲಿ ಮುಂಗಡ ಒಂದು ಲಕ್ಷ ರೂ. ನೀಡುವುದಾಗಿ ಮಹೇಶ್ ಹೇಳಿದ್ದು ಬುಧವಾರ ಮೂಡಿಗೆರೆ ತಾಲೂಕು ಕಚೇರಿ ಬಳಿ ಪ್ರಕಾಶ್ ಹಣ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಕಾರ್ಯಾಚರಣೆಯಲ್ಲಿ ಎಸಿಬಿ ಎಸ್ಪಿ ಸೈಮನ್, ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here